ADVERTISEMENT

ಬಂಡವಾಳ ಮಾರುಕಟ್ಟೆ: ನವೆಂಬರ್‌ನಲ್ಲಿ ‘ಎಫ್‌ಪಿಐ’ ಒಳಹರಿವು ₹ 5,319 ಕೋಟಿ

ಪಿಟಿಐ
Published 28 ನವೆಂಬರ್ 2021, 13:28 IST
Last Updated 28 ನವೆಂಬರ್ 2021, 13:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ನವೆಂಬರ್‌ 1 ರಿಂದ 26ರವರೆಗಿನ ಅವಧಿಯಲ್ಲಿ ದೇಶದ ಬಂಡವಾಳ ಮಾರುಕಟ್ಟೆಯಲ್ಲಿ ₹ 5,319 ಕೋಟಿ ಹೂಡಿಕೆ ಮಾಡಿದ್ದಾರೆ. ಅಕ್ಟೋಬರ್‌ನಲ್ಲಿ ₹ 12,437 ಕೋಟಿಗಳಷ್ಟು ಮೌಲ್ಯದ ಷೇರುಗಳನ್ನು ಮತ್ತು ಸಾಲಪತ್ರಗಳನ್ನು ಮಾರಾಟ ಮಾಡಿದ್ದರು.

ಹೂಡಿಕೆದಾರರು ₹ 1,400 ಕೋಟಿ ಮೌಲ್ಯದ ಷೇರುಗಳನ್ನು ಹಾಗೂ ₹ 3,919 ಕೋಟಿ ಮೌಲ್ಯದ ಸಾಲಪತ್ರಗಳನ್ನು ಖರೀದಿಸಿದ್ದಾರೆ. ಇದರಿಂದಾಗಿ ಒಟ್ಟಾರೆ ಹೂಡಿಕೆಯು ₹ 5,319 ಕೋಟಿಗಳಷ್ಟಾಗಿದೆ.

ಕೋವಿಡ್‌ನ ಹೊಸ ತಳಿಯ ಹರಡುವಿಕೆ ಮತ್ತು ಜಾಗತಿಕವಾಗಿ ಆರ್ಥಿಕ ಬೆಳವಣಿಗೆಯ ಮೇಲೆ ಅದರಿಂದ ಆಗಲಿರುವ ಪರಿಣಾಮಗಳ ಬಗ್ಗೆ ಹೂಡಿಕೆದಾರರು ಗಮನ ಹರಿಸುತ್ತಿದ್ದಾರೆ ಎಂದು ಮಾರ್ನಿಂಗ್‌ಸ್ಟಾರ್‌ ಇಂಡಿಯಾದ ಸಹಾಯಕ ನಿರ್ದೇಶಕ ಹಿಮಾಂಶು ಶ್ರೀವಾಸ್ತವ ಹೇಳಿದ್ದಾರೆ.

ADVERTISEMENT

ಎಫ್‌ಪಿಐ ಹೆಚ್ಚಿನ ಪ್ರಮಾಣದಲ್ಲಿ ಬ್ಯಾಂಕಿಂಗ್‌ ಷೇರುಗಳನ್ನು ಹೊಂದಿರುವುದರಿಂದ ಈ ವಿಭಾಗದಲ್ಲಿ ಪ್ರಮುಖ ಮಾರಾಟಗಾರರಾಗಿದ್ದಾರೆ. ಅವರುಬ್ಯಾಂಕಿಂಗ್‌ ಷೇರುಗಳು ನಿರಂತರವಾಗಿ ಮಾರಾಟ ಮಾಡುತ್ತಿರುವುದರಿಂದ ಮೌಲ್ಯದ ದೃಷ್ಟಿಯಿಂದ ಅವು ಹೆಚ್ಚು ಆಕರ್ಷಕವಾಗಿವೆ ಎಂದು ಜಿಯೋಜಿತ್ ಹಣಕಾಸು ಸೇವೆಗಳ ವಿಭಾಗದ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.