ADVERTISEMENT

ಎಫ್‌ಪಿಐ: ಷೇರುಪೇಟೆಯಿಂದ ₹ 5,689 ಕೋಟಿ ಹೊರಹರಿವು

ಪಿಟಿಐ
Published 25 ಜುಲೈ 2021, 15:20 IST
Last Updated 25 ಜುಲೈ 2021, 15:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಜುಲೈ 1ರಿಂದ 23ರವರೆಗಿನ ಅವಧಿಯಲ್ಲಿ ದೇಶದ ಷೇರುಪೇಟೆಯಿಂದ ₹ 5,689 ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದಾರೆ.

ಇದೇ ಅವಧಿಯಲ್ಲಿ ಸಾಲಪತ್ರ ಮಾರುಕಟ್ಟೆಯಲ್ಲಿ ₹ 3,191 ಕೋಟಿ ಹೂಡಿಕೆ ಮಾಡಿದ್ದಾರೆ. ಇದರಿಂದಾಗಿ ಒಟ್ಟಾರೆ ಹೊರಹರಿವಿನ ಮೊತ್ತ ₹ 2,498 ಕೋಟಿಗಳಷ್ಟಾಗಿದೆ.

ಮಾರುಕಟ್ಟೆ ಮೌಲ್ಯ ವೃದ್ಧಿ, ಕಚ್ಚಾತೈಲ ದರ ಏರಿಕೆ ಹಾಗೂ ಅಮೆರಿಕದ ಡಾಲರ್‌ ಮೌಲ್ಯ ಸ್ಥಿರವಾಗಿರುವ ಕಾರಣಗಳಿಂದಾಗಿ ವಿದೇಶಿ ಹೂಡಿಕೆದಾರರು ದೇಶದ ಷೇರುಪೇಟೆಯಲ್ಲಿನ ಹೂಡಿಕೆಯಿಂದ ಹಿಂದೆ ಸರಿಯುವಂತೆ ಆಗಿದೆ ಎಂದು ಮಾರ್ನಿಂಗ್‌ಸ್ಟಾರ್‌ ಇಂಡಿಯಾದ ಸಹಾಯಕ ನಿರ್ದೇಶಕ ಹಿಮಾಂಶು ಶ್ರೀವಾಸ್ತವ ಹೇಳಿದ್ದಾರೆ.

ADVERTISEMENT

ದೀರ್ಘಾವಧಿಯ ದೃಷ್ಟಿಯಿಂದ ಭಾರತವು ಹೂಡಿಕೆಗೆ ಆಕರ್ಷಕ ತಾಣವಾಗಿ ಮುಂದುವರಿಯಲಿದೆ. ಆರ್ಥಿಕ ಚಟುವಟಿಕೆಗಳಲ್ಲಿ ಸುಧಾರಣೆ ಆಗಿ, ದೇಶಿ ಆರ್ಥಿಕತೆಯು ಚೇತರಿಕೆ ಹಾದಿಗೆ ಮರಳಲು ಆರಂಭಿಸಿದ ಬಳಿಕ ವಿದೇಶಿ ಬಂಡವಾಳ ಒಳಹರಿವು ಮತ್ತೆ ಆರಂಭವಾಗುವ ನಿರೀಕ್ಷೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸೆನ್ಸೆಕ್ಸ್‌ ಮತ್ತು ನಿಫ್ಟಿ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ವಹಿವಾಟು ನಡೆಸುತ್ತಿರುವಾಗ ಬಂಡವಾಳ ಹೂಡಿಕೆ ಮಾಡಲು ವಿದೇಶಿ ಹೂಡಿಕೆದಾರರು ಬಹಳ ಜಾಗರೂಕತೆ ತೋರಿದ್ದಾರೆ ಎಂದು ಗ್ರೋವ್‌ ಸಂಸ್ಥೆಯ ಸಹ ಸ್ಥಾಪಕ ಹರ್ಷ್‌ ಜೈನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.