ADVERTISEMENT

ಇಂದೂ ಏರಿದೆ ತೈಲ ಬೆಲೆ: ರಾಜಸ್ಥಾನದಲ್ಲಿ ಲೀಟರ್‌ ಪೆಟ್ರೋಲ್‌ ₹108, ಡೀಸೆಲ್‌ ₹101

ಏಜೆನ್ಸೀಸ್
Published 20 ಜೂನ್ 2021, 5:17 IST
Last Updated 20 ಜೂನ್ 2021, 5:17 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಭಾನುವಾರ ದೇಶಾದಾದ್ಯಂತ ಇಂಧನ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಹೀಗಾಗಿ ರಾಜಸ್ಥಾನದಲ್ಲಿ ಒಂದು ಲೀಟರ್ ಪೆಟ್ರೋಲ್‌ ದರ ₹108.37 ಕ್ಕೆ ಏರಿದ್ದರೆ, ಲೀಟರ್‌ ಡೀಸೆಲ್ ₹101.12 ಆಗಿದೆ.

ಮುಂಬೈನಲ್ಲಿ ಪೆಟ್ರೋಲ್ ಈಗ ₹103.36 ಮತ್ತು ಡೀಸೆಲ್ ಲೀಟರ್‌ ₹95.44 ಆಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಶನ್ ತಿಳಿಸಿದೆ. ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ ₹97.22 ಮತ್ತು ಡೀಸೆಲ್ ಲೀಟರ್‌ಗೆ ₹87.97ಕ್ಕೆ ಮಾರಾಟವಾಗುತ್ತಿದೆ.

ಇನ್ನು ಬೋಪಾಲ್‌ನಲ್ಲಿ ಪೆಟ್ರೋಲ್‌ ಲೀಟರ್‌ಗೆ ₹105.43, ಡೀಸೆಲ್ ಲೀಟರ್‌ಗೆ ₹96.65ಕ್ಕೆ ಹೆಚ್ಚಳವಾಗಿದೆ.

ADVERTISEMENT

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಈ ಒಂದು ಲೀಟರ್‌ ಪೆಟ್ರೋಲ್ ದರ ₹100.47, ಡೀಸೆಲ್‌ ₹93.26 ಆಗಿದೆ. ಇದರ ಜೊತೆಗೆ ಮೈಸೂರು, ಹುಬ್ಬಳ್ಳಿಯಲ್ಲಿಯೂ ಪೆಟ್ರೋಲ್‌ ನೂರರ ಗಡಿ ದಾಟಿದೆ.

ಭಾನುವಾರ ಪ್ರತಿ ಲೀಟರ್‌ ಪೆಟ್ರೋಲ್‌ ಮೇಲೆ 28 ಪೈಸೆ, ಡೀಸೆಲ್‌ ಮೇಲೆ 30 ಪೈಸೆ ಹೆಚ್ಚಳ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.