ADVERTISEMENT

ಬಂಡವಾಳ ಮಾರುಕಟ್ಟೆ ಮೂಲಕ ಕಂಪನಿಗಳ ಬಂಡವಾಳ ಸಂಗ್ರಹ ಇಳಿಕೆ

ಪಿಟಿಐ
Published 4 ನವೆಂಬರ್ 2020, 15:21 IST
Last Updated 4 ನವೆಂಬರ್ 2020, 15:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕಂಪನಿಗಳು ಬಂಡವಾಳ ಮಾರುಕಟ್ಟೆಯಿಂದ ಸೆಪ್ಟೆಂಬರ್‌ನಲ್ಲಿ ₹ 75 ಸಾವಿರ ಕೋಟಿ ಸಂಗ್ರಹಿಸಿವೆ. ಆಗಸ್ಟ್‌ನಲ್ಲಿ ಸಂಗ್ರಹವಾಗಿದ್ದ ಮೊತ್ತಕ್ಕೆ ಹೋಲಿಸಿದರೆ ಶೇಕಡ 31ರಷ್ಟು ಇಳಿಕೆ ಆಗಿದೆ.

ಷೇರುಗಳು ಮತ್ತು ಸಾಲಪತ್ರಗಳ ಮಾರಾಟದಿಂದ ಕಂಪನಿಗಳು ಆಗಸ್ಟ್‌ನಲ್ಲಿ ₹ 1.1 ಲಕ್ಷ ಕೋಟಿ ಸಂಗ್ರಹಿಸಿದ್ದವು ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಮಾಹಿತಿ ನೀಡಿದೆ.

ವಹಿವಾಟು ವಿಸ್ತರಣೆ ಯೋಜನೆಗಳು, ಸಾಲ ಮರುಪಾವತಿ ಹಾಗೂ ದುಡಿಯುವ ಬಂಡವಾಳದ ಅಗತ್ಯ ಈಡೇರಿಸಿಕೊಳ್ಳಲು ಕಂಪನಿಗಳು ಮಾರುಕಟ್ಟೆಯಿಂದ ಹಣ ಸಂಗ್ರಹಿಸುತ್ತವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.