ADVERTISEMENT

ಕಂಪನಿಗಳ ಬಾಂಡ್‌ ಮಾರಾಟದಿಂದ ₹ 5.88 ಲಕ್ಷ ಕೋಟಿ ಬಂಡವಾಳ ಸಂಗ್ರಹ

ಪಿಟಿಐ
Published 15 ಏಪ್ರಿಲ್ 2022, 11:25 IST
Last Updated 15 ಏಪ್ರಿಲ್ 2022, 11:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಷೇರುಪೇಟೆಯಲ್ಲಿ ನೋಂದಾಯಿತ ಕಂಪನಿಗಳು ಕಾರ್ಪೊರೇಟ್‌ ಬಾಂಡ್‌ ಮಾರಾಟ ಮಾಡುವ ಮೂಲಕ2021–22ನೇ ಹಣಕಾಸು ವರ್ಷದಲ್ಲಿ ₹ 5.88 ಲಕ್ಷ ಕೋಟಿ ಬಂಡವಾಳ ಸಂಗ್ರಹಿಸಿವೆ.

2015–16ನೇ ಹಣಕಾಸು ವರ್ಷದ ಬಳಿಕ ಸಂಗ್ರಹ ಆಗಿರುವ ಅತ್ಯಂತ ಕನಿಷ್ಠ ಮೊತ್ತ ಇದಾಗಿದೆ. ಆ ಅವಧಿಯಲ್ಲಿ ₹ 4.58 ಲಕ್ಷ ಕೋಟಿ ಸಂಗ್ರಹ ಆಗಿತ್ತು.

2020–21ನೇ ಹಣಕಾಸು ವ‌ರ್ಷದಲ್ಲಿ ₹ 7.72 ಲಕ್ಷ ಕೋಟಿ ಬಂಡವಾಳ ಸಂಗ್ರಹ ಆಗಿತ್ತು. ಇದಕ್ಕೆ ಹೋಲಿಸಿದರೆ 2021–22ರಲ್ಲಿ ಶೇಕಡ 24ರಷ್ಟು ಕಡಿಮೆ ಸಂಗ್ರಹ ಆದಂತಾಗಿದೆ. ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಈ ಮಾಹಿತಿ ನೀಡಿದೆ.

ADVERTISEMENT

ಸರ್ಕಾರಿ ಸಾಲ ಹೆಚ್ಚಾಗದೇ ಇದ್ದರೆ ಮತ್ತು ಬಡ್ಡಿ ದರಗಳು ಪ್ರತಿಕೂಲವಾಗಿ ಪರಿಣಮಿಸದೆ ಇದ್ದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ (2022–23) ಕಂಪನಿಗಳು ಬಾಂಡ್‌ಗಳ ಮೂಲಕ ಬಂಡವಾಳ ಸಂಗ್ರಹಿಸುವುದು ಹೆಚ್ಚಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆರ್ಥಿಕ ಮುನ್ನೋಟ ಸುಧಾರಿಸುತ್ತಿರುವುದರಿಂದ ಸಾಲಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.