ADVERTISEMENT

ಗೌತಮ್ ಅದಾನಿ ಈಗ ವಿಶ್ವದ 3ನೇ ಶ್ರೀಮಂತ ವ್ಯಕ್ತಿ

ಪಿಟಿಐ
Published 30 ಆಗಸ್ಟ್ 2022, 12:28 IST
Last Updated 30 ಆಗಸ್ಟ್ 2022, 12:28 IST
ಉದ್ಯಮಿ ಗೌತಮ್ ಅದಾನಿ
ಉದ್ಯಮಿ ಗೌತಮ್ ಅದಾನಿ   

ಮುಂಬೈ: ಉದ್ಯಮಿ ಗೌತಮ್ ಅದಾನಿ ಅವರು ಬ್ಲೂಮ್‌ಬರ್ಗ್‌ ಬಿಲಿಯನೇರ್ಸ್‌ ಸೂಚ್ಯಂಕದ ಪ್ರಕಾರ ಈಗ ವಿಶ್ವದ ಮೂರನೆಯ ಅತ್ಯಂತ ಶ್ರೀಮಂತ ವ್ಯಕ್ತಿ. ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಏಷ್ಯಾದ ವ್ಯಕ್ತಿಯೊಬ್ಬರು ಟಾಪ್–3 ಸ್ಥಾನಗಳಲ್ಲಿ ಒಂದನ್ನು ಪಡೆದಿರುವುದು ಇದೇ ಮೊದಲು.

ಅದಾನಿ ಅವರ ಆಸ್ತಿಯ ಮೌಲ್ಯವು ಒಂದು ವರ್ಷದ ಅವಧಿಯಲ್ಲಿ ಎರಡು ಪಟ್ಟಿಗಿಂತ ಹೆಚ್ಚಾಗಿದೆ, ಅವರು ಶ್ರೀಮಂತರ ಪಟ್ಟಿಯಲ್ಲಿ 20 ಸ್ಥಾನಗಳಷ್ಟು ಮೇಲಕ್ಕೆ ಬಂದಿದ್ದಾರೆ. ಈಗ ಮೊದಲ ಹಾಗೂ ಎರಡನೆಯ ಸ್ಥಾನಗಳಲ್ಲಿ ಕ್ರಮವಾಗಿ ಇಲಾನ್‌ ಮಸ್ಕ್ ಮತ್ತು ಜೆಫ್‌ ಬೆಜಾಸ್ ಇದ್ದಾರೆ ಎಂದು ಬ್ಲೂಮ್‌ಬರ್ಗ್‌ ನ್ಯೂಸ್ ವರದಿ ಮಾಡಿದೆ.

ಅದಾನಿ ಸಮೂಹಕ್ಕೆ ಸೇರಿರುವ ಅದಾನಿ ಎಂಟರ್‌ಪ್ರೈಸಸ್‌ ಕಂಪನಿಯ ಷೇರು ಮೌಲ್ಯವು 2020ರ ಮಾರ್ಚ್‌ ನಂತರ ಶೇಕಡ 2,400ಕ್ಕೂ ಹೆಚ್ಚು ಏರಿಕೆ ಕಂಡಿದೆ. ಕಳೆದ ಆರು ತಿಂಗಳಲ್ಲಿ ಷೇರು ಮೌಲ್ಯವು ದುಪ್ಪಟ್ಟಾಗಿದೆ. ಈ ಕಂಪನಿಯಲ್ಲಿ ಅದಾನಿ ಅವರು ಶೇಕಡ 75ರಷ್ಟು ಪಾಲು ಹೊಂದಿದ್ದಾರೆ.

ADVERTISEMENT

=

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕ

1;ಇಲಾನ್ ಮಸ್ಕ್;ಅಮೆರಿಕ;₹19.96 ಲಕ್ಷ ಕೋಟಿ

2;ಜೆಫ್‌ ಬೆಜಾಸ್;ಅಮೆರಿಕ;₹ 12.16 ಲಕ್ಷ ಕೋಟಿ

3;ಗೌತಮ್ ಅದಾನಿ;ಭಾರತ;₹ 10.89 ಲಕ್ಷ ಕೋಟಿ

4;ಬರ್ನಾರ್ಡ್‌ ಅರ್ನಾಲ್ಟ್;ಫ್ರಾನ್ಸ್‌;₹ 10.81 ಲಕ್ಷ ಕೋಟಿ

5;ಬಿಲ್ ಗೇಟ್ಸ್;ಅಮೆರಿಕ;₹ 9.30 ಲಕ್ಷ ಕೋಟಿ

(ಕೆಬಿಕೆ ಇನ್ಫೊಗ್ರಾಫಿಕ್ಸ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.