ADVERTISEMENT

ಜಿಡಿಪಿ ಮುನ್ನೋಟ; ಫೆ. 28ಕ್ಕೆ ವರದಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2023, 21:05 IST
Last Updated 16 ಜನವರಿ 2023, 21:05 IST

ನವದೆಹಲಿ: ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ವಾರ್ಷಿಕ ಮುನ್ನೋಟದ ವರದಿಯನ್ನು ಫೆಬ್ರುವರಿ 28ರಂದು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.

ಇದುವರೆಗೆ ಈ ವರದಿಯನ್ನು ಜನವರಿ 31ರಂದು ಬಿಡುಗಡೆ ಮಾಡಲಾಗುತ್ತಿತ್ತು. ಬಜೆಟ್ ಮಂಡನೆಯ ಒಂದು ದಿನ ಮೊದಲು ಆರ್ಥಿಕ ಸಮೀಕ್ಷೆಯ ವರದಿಯನ್ನು ಮಂಡಿಸಲಾಗುತ್ತದೆ. ಈ ವರ್ಷ ಅದು ಜನವರಿ 31ರಂದು ಮಂಡನೆ ಆಗಲಿದೆ.

ಆರ್ಥಿಕ ಸಮೀಕ್ಷೆಯ ವರದಿಯಲ್ಲಿಯೂ ಜಿಡಿಪಿ ಬೆಳವಣಿಗೆಗೆ ಸಂಬಂಧಿಸಿದ ಅಂಕಿ–ಅಂಶಗಳು ಇರುತ್ತವಾದ ಕಾರಣ, ಗೊಂದಲ ಸೃಷ್ಟಿಯಾಗದಿರಲಿ ಎಂಬ ಉದ್ದೇಶದಿಂದ ಎನ್‌ಎಸ್‌ಒ ಬಿಡುಗಡೆ ಮಾಡುವ ಮುನ್ನೋಟದ ವರದಿಯ ದಿನಾಂಕವನ್ನು ಕೇಂದ್ರವು ಬದಲಾಯಿಸಿರಬಹುದು ಎನ್ನಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.