
ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಶೇ 6.5ರಷ್ಟು ಮತ್ತು 2026–27ರಲ್ಲಿ ಶೇ 6.7ರಷ್ಟಾಗಬಹುದು ಎಂದು ಎಸ್ ಆ್ಯಂಡ್ ಪಿ ಗ್ಲೋಬಲ್ ರೇಟಿಂಗ್ ಸಂಸ್ಥೆ ಅಂದಾಜಿಸಿದೆ.
ಜಿಎಸ್‌ಟಿ ದರ ಇಳಿಕೆಯು ಮಧ್ಯಮ ವರ್ಗದ ಜನರಲ್ಲಿ ಖರೀದಿ ಸಾಮರ್ಥ್ಯ ಹೆಚ್ಚಿಸಲಿದೆ. ಕೇಂದ್ರ ಸರ್ಕಾರವು ಆದಾಯ ತೆರಿಗೆ ವಿನಾಯಿತಿಯನ್ನು ಹೆಚ್ಚು ಮಾಡಿರುವುದು ಮತ್ತು ಆರ್‌ಬಿಐ ರೆಪೊ ದರ ಇಳಿಕೆ ಮಾಡಿರುವುದು ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿಸಲು ಉತ್ತೇಜನ ನೀಡಲಿವೆ. ಇವು ಜಿಡಿಪಿ ಹೆಚ್ಚಳಕ್ಕೆ ಕಾರಣವಾಗಲಿವೆ ಎಂದು ಸೋಮವಾರ ಹೇಳಿದೆ.
ಗ್ರಾಹಕರು ಸರಕುಗಳನ್ನು ಖರೀದಿಸುವ ಮಟ್ಟವು ಚೆನ್ನಾಗಿಯೇ ಇದೆ. ಇದರಿಂದ, ದೇಶದ ಬೆಳವಣಿಗೆ ಉತ್ತಮವಾಗಿದೆ ಎಂದು ತನ್ನ ಏಷ್ಯಾ–ಪೆಸಿಫಿಕ್ ಆರ್ಥಿಕ ಮುನ್ನೋಟದ ವರದಿಯಲ್ಲಿ ಹೇಳಿದೆ.
ಭಾರತ ಮತ್ತು ಅಮೆರಿಕದ ನಡುವೆ ವ್ಯಾಪಾರ ಒಪ್ಪಂದ ಸಾಧ್ಯವಾದರೆ ಅನಿಶ್ಚಿತತೆ ಕಡಿಮೆ ಆಗಲಿದೆ. ಇದು ಹೂಡಿಕೆದಾರರಲ್ಲಿ ಭರವಸೆ ಹೆಚ್ಚಿಸುವುದಲ್ಲದೆ, ಕಾರ್ಮಿಕ ಕೇಂದ್ರೀತ ವಲಯಗಳಿಗೆ ಉತ್ತೇಜನ ನೀಡಲಿದೆ ಎಂದು ತಿಳಿಸಿದೆ.
ಜೂನ್ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಶೇ 7.8ರಷ್ಟು ದಾಖಲಾಗಿತ್ತು. ಇದು 15 ತಿಂಗಳ ಅಧಿಕವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.