ADVERTISEMENT

ಜಿಇಎಫ್‌ ಇಂಡಿಯಾಗೆ ಪ್ಲಾಟಿನಂ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 16:39 IST
Last Updated 7 ಅಕ್ಟೋಬರ್ 2021, 16:39 IST

ಬೆಂಗಳೂರು: ಫ್ರೀಡಂ ರಿಫೈನ್ಡ್‌ ಸೂರ್ಯಕಾಂತಿ ಎಣ್ಣೆ ತಯಾರಕ ಕಂಪನಿಯಾದ ಜೆಮಿನಿ ಎಡಿಬಲ್ಸ್ ಆ್ಯಂಡ್‌ ಫ್ಯಾಟ್ಸ್‌ ಇಂಡಿಯಾ ಲಿಮಿಟೆಡ್‌ಗೆ (ಜಿಇಎಫ್‌ ಇಂಡಿಯಾ) 2021ನೇ ಸಾಲಿನ ಗ್ಲೋಬಾಯಿಲ್‌ ಪ್ರಶಸ್ತಿಗಳ ಪೈಕಿ, ದೇಶಕ್ಕೆ ‘ಅತ್ಯಂತ ಹೆಚ್ಚಿನ ಕಚ್ಚಾ ಸೂರ್ಯಕಾಂತಿ ಎಣ್ಣೆ ಆಮದು’ ಮಾಡಿಕೊಂಡ ವಿಭಾಗದಲ್ಲಿ ಪ್ಲಾಟಿನಂ ಪ್ರಶಸ್ತಿ ಲಭಿಸಿದೆ.

ಅಡುಗೆ ಎಣ್ಣೆ ಉದ್ಯಮದಲ್ಲಿ ಗ್ಲೋಬಾಯಿಲ್ ಪ್ರಶಸ್ತಿಗಳು ಅತ್ಯಂತ ವಿಶ್ವಾಸಾರ್ಹತೆ ಹೊಂದಿವೆ ಎಂದು ಕಂಪನಿಯ ಪ್ರಕಟಣೆ ಹೇಳಿದೆ. ಕಚ್ಚಾ ಸೂರ್ಯಕಾಂತಿ ಎಣ್ಣೆಯನ್ನು ಜಿಇಎಫ್‌ ಇಂಡಿಯಾ ಕಂಪನಿಯ ಮೂರು ಸಂಸ್ಕರಣಾ ಘಟಕಗಳಲ್ಲಿ ಸಂಸ್ಕರಿಸಿ, ದೇಶದ ಎಲ್ಲೆಡೆ ಮಾರಾಟ ಮಾಡಲಾಗುತ್ತದೆ.

‘ಗ್ಲೋಬಾಯಿಲ್ ಪ್ರಶಸ್ತಿ ಪಡೆದಿರುವುದು ನಮಗೆ ಸಂತಸ ತಂದಿದೆ. ಇದಕ್ಕೆ ನಾವು ನಮ್ಮ ಗ್ರಾಹಕರು, ವಿತರಕರು ಮತ್ತು ಸಣ್ಣ ವ್ಯಾಪಾರಸ್ಥರಿಗೆ ಧನ್ಯವಾದ ಅರ್ಪಿಸುತ್ತೇವೆ’ ಎಂದು ಫ್ರೀಡಂ ಹೆಲ್ತಿ ಕುಕಿಂಗ್ ಆಯಿಲ್ಸ್‌ನ ಮಾರಾಟ ವಿಭಾಗದ ಹಿರಿಯ ಉಪಾಧ್ಯಕ್ಷ ಪಿ. ಚಂದ್ರಶೇಖರ ರೆಡ್ಡಿ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.