ADVERTISEMENT

ಜಿಇಎಂ ಮೂಲಕ ಹರಾಜು: ₹2,200 ಕೋಟಿ ಸಂಗ್ರಹ

ಪಿಟಿಐ
Published 21 ಡಿಸೆಂಬರ್ 2025, 16:06 IST
Last Updated 21 ಡಿಸೆಂಬರ್ 2025, 16:06 IST
ಜಿಇಎಂ
ಜಿಇಎಂ   

ನವದೆಹಲಿ: ಸರ್ಕಾರದ ಇ–ಮಾರುಕಟ್ಟೆ ಪೋರ್ಟಲ್‌ ಆದ ‘ಜಿಇಎಂ’ ಕಳೆದ ನಾಲ್ಕು ವರ್ಷದಲ್ಲಿ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳ ಗುಜರಿ, ಇ–ತ್ಯಾಜ್ಯ, ಹಳೆಯ ವಾಹನಗಳು, ಯಂತ್ರೋಪಕರಣಗಳು ಮತ್ತು ಗುತ್ತಿಗೆ ಆಸ್ತಿಗಳಂತಹ ಸ್ವತ್ತುಗಳ ಮಾರಾಟದಿಂದ ₹2,200 ಕೋಟಿ ಸಂಗ್ರಹಿಸಲು ಅನುವು ಮಾಡಿಕೊಟ್ಟಿದೆ.

ಸಚಿವಾಲಯಗಳು, ಸರ್ಕಾರದ ಇಲಾಖೆಗಳು, ಸಾರ್ವಜನಿಕ ವಲಯದ ಉದ್ದಿಮೆಗಳು, ಸರಕು ಮತ್ತು ಸೇವೆಗಳನ್ನು ಈ ಆನ್‌ಲೈನ್‌ ವೇದಿಕೆಯ ಮೂಲಕ ಪಡೆದುಕೊಳ್ಳುತ್ತವೆ.

2021ರ ಡಿಸೆಂಬರ್‌ನಿಂದ 2025ರ ನವೆಂಬರ್‌ವರೆಗೆ ಜಿಇಎಂ 13 ಸಾವಿರಕ್ಕೂ ಹೆಚ್ಚು ಹರಾಜು ನಡೆಸಿದೆ. ಈ ಹರಾಜಿನಲ್ಲಿ ನೋಂದಾಯಿತ 23 ಸಾವಿರ ಬಿಡ್‌ದಾರರು ಮತ್ತು 17 ಸಾವಿರಕ್ಕೂ ಹೆಚ್ಚು ಹರಾಜುದಾರರು ಪಾಲ್ಗೊಂಡಿದ್ದರು ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಭಾನುವಾರ ತಿಳಿಸಿದೆ.

ADVERTISEMENT

ಈ ಡಿಜಿಟಲ್‌ ಬಿಡ್ಡಿಂಗ್‌ ಪ್ರಕ್ರಿಯೆಯಲ್ಲಿ ಸರ್ಕಾರಿ ಇಲಾಖೆಗಳು ಗುಜರಿ, ಇ–ತ್ಯಾಜ್ಯ, ಯಂತ್ರೋಪಕರಣಗಳು, ಹಳೆಯ ವಾಹನಗಳನ್ನು ಹೆಚ್ಚು ಬಿಡ್‌ ಮಾಡಿದವರಿಗೆ ಮಾರಾಟ ಮಾಡಿವೆ.

ಭಾರತೀಯ ಸ್ಟೇಟ್‌ ಬ್ಯಾಂಕ್‌ ಈ ಹರಾಜಿನ ಮೂಲಕ ಲಖನೌದಲ್ಲಿನ ಫ್ಲಾಟ್‌ಗಳನ್ನು ಹರಾಜು ಮಾಡಿ, ₹34.53 ಕೋಟಿ ಸಂಗ್ರಹಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.