ಮುಂಬೈ: ಏಪ್ರಿಲ್‌ನಲ್ಲಿ ದೇಶದ ಹರಳು ಮತ್ತು ಚಿನ್ನಾಭರಣಗಳ ರಫ್ತು ಪ್ರಮಾಣದಲ್ಲಿ ಶೇ 4.62ರಷ್ಟು ಇಳಿಕೆಯಾಗಿದೆ ಎಂದು ಹರಳು ಮತ್ತು ಚಿನ್ನಾಭರಣಗಳ ರಫ್ತು ಉತ್ತೇಜನಾ ಮಂಡಳಿ (ಜಿಜೆಇಪಿಸಿ) ಮಂಗಳವಾರ ತಿಳಿಸಿದೆ.
ಏಪ್ರಿಲ್‌ನಲ್ಲಿ ಒಟ್ಟು ರಫ್ತು ಮೌಲ್ಯ ₹17,380 ಕೋಟಿ ಆಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ₹18,221 ಕೋಟಿಯಷ್ಟಿತ್ತು ಎಂದು ತಿಳಿಸಿದೆ.
ಕತ್ತರಿಸಿದ ಮತ್ತು ಪಾಲಿಶ್ ಮಾಡಿದ ವಜ್ರಗಳ ರಫ್ತು ಶೇ 6ರಷ್ಟು ಇಳಿಕೆಯಾಗಿದೆ. ಒಟ್ಟು ₹9,460 ಕೋಟಿಯಷ್ಟು ರಫ್ತು ಮಾಡಲಾಗಿದೆ.
ಚಿನ್ನಾಭರಣಗಳ ರಫ್ತು ₹5,841 ಕೋಟಿಯಾಗಿದ್ದು, ಶೇ 5ರಷ್ಟು ಇಳಿದಿದೆ. ಪ್ರಯೋಗಾಲಯದಲ್ಲಿ ತಯಾರಿಸಲಾದ ವಜ್ರಗಳ ರಫ್ತು ₹944 ಕೋಟಿಯಾಗಿದೆ. ಬೆಳ್ಳಿ ಆಭರಣಗಳ ರಫ್ತು ಶೇ 12ರಷ್ಟು ಕಡಿಮೆಯಾಗಿದ್ದು, ₹326 ಕೋಟಿಯಾಗಿದೆ.
ಬಣ್ಣದ ಹರಳುಗಳ ರಫ್ತು ಶೇ 12ರಷ್ಟು ಹೆಚ್ಚಳವಾಗಿದ್ದು, ₹236 ಕೋಟಿಯಾಗಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.