ADVERTISEMENT

ಬೆಂಗಳೂರು: ಗಿರಿಯಾಸ್ 100ನೇ ಮಳಿಗೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2021, 17:27 IST
Last Updated 8 ಅಕ್ಟೋಬರ್ 2021, 17:27 IST
ಗಿರಿಯಾಸ್ ಕಂಪನಿಯ ನೂರನೆಯ ಮಳಿಗೆಯನ್ನು ನಗರದ ‘ಭಾರ್ತಿಯಾ ಸಿಟಿ’ಯಲ್ಲಿ ಶುಕ್ರವಾರ ಉದ್ಘಾಟಿಸಲಾಯಿತು.
ಗಿರಿಯಾಸ್ ಕಂಪನಿಯ ನೂರನೆಯ ಮಳಿಗೆಯನ್ನು ನಗರದ ‘ಭಾರ್ತಿಯಾ ಸಿಟಿ’ಯಲ್ಲಿ ಶುಕ್ರವಾರ ಉದ್ಘಾಟಿಸಲಾಯಿತು.   

ಬೆಂಗಳೂರು: ಎಲೆಕ್ಟ್ರಾನಿಕ್ಸ್‌ ಮತ್ತು ಇತರ ಗೃಹಬಳಕೆಯ ಉಪಕರಣಗಳ ಮಾರಾಟ ಕಂಪನಿಯಾಗಿರುವ ಗಿರಿಯಾಸ್‌, ತನ್ನ ನೂರನೆಯ ಮೆಗಾ ಮಳಿಗೆಯನ್ನು ನಗರದ ಥಣಿಸಂದ್ರ ಮುಖ್ಯರಸ್ತೆಯಲ್ಲಿರುವ ‘ಭಾರ್ತಿಯಾ ಸಿಟಿ’ಯಲ್ಲಿ ಆರಂಭಿಸಿದೆ.

ಹೊಸ ಮಳಿಗೆಯು ಶುಕ್ರವಾರದಿಂದ ಗ್ರಾಹಕರ ಸೇವೆಗೆ ಲಭ್ಯವಾಗಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ. ಕಂಪನಿಯು ಈಗ ಮೂರು ರಾಜ್ಯಗಳ 49 ನಗರಗಳಲ್ಲಿ ಮಳಿಗೆಗಳನ್ನು ಹೊಂದಿದೆ.

ಕಂಪನಿಯು 50 ವರ್ಷಗಳನ್ನು ಪೂರೈಸಿ, 100 ಮಳಿಗೆಗಳನ್ನು ತೆರೆದಿರುವ ಕಾರಣಕ್ಕೆ ಗ್ರಾಹಕರಿಗೆ ಹಲವು ಕೊಡುಗೆಗಳನ್ನು ಘೋಷಿಸಲಾಗಿದೆ. ಗರಿಷ್ಠ ₹ 5 ಸಾವಿರದವರೆಗಿನ ಗಿಫ್ಟ್‌ ವೋಚರ್‌ಗಳು, ಪ್ರಮುಖ ಬ್ರ್ಯಾಂಡ್‌ಗಳ ಉಪಕರಣ ಖರೀದಿಯ ಮೇಲೆ ಉಡುಗೊರೆಗಳು, ಗರಿಷ್ಠ ಶೇ 20ರವರೆಗೆ ಕ್ಯಾಶ್‌ಬ್ಯಾಕ್‌, ಉಚಿತವಾಗಿ ಹಣಕಾಸು ಸೇವೆಗಳನ್ನು ಒದಗಿಸುವುದು ಇವುಗಳಲ್ಲಿ ಸೇರಿದೆ. ಸಂಪರ್ಕ ಸಂಖ್ಯೆ: 70900 00981

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.