ADVERTISEMENT

14.90 ಕೋಟಿಗೂ ಹೆಚ್ಚಿನ ಜಿಮೇಲ್‌, ಫೇಸ್‌ಬುಕ್‌, ಇನ್‌ಸ್ಟಾ ವಿವರ ಸೋರಿಕೆ: ವರದಿ

ಪಿಟಿಐ
Published 24 ಜನವರಿ 2026, 15:55 IST
Last Updated 24 ಜನವರಿ 2026, 15:55 IST
<div class="paragraphs"><p>ಸಾಮಾಜಿಕ ಮಾಧ್ಯಮ&nbsp;</p></div>

ಸಾಮಾಜಿಕ ಮಾಧ್ಯಮ 

   

ನವದೆಹಲಿ: 14.90 ಕೋಟಿಗಿಂತ ಹೆಚ್ಚಿನ ಜನರ ಜಿಮೇಲ್‌, ಇನ್‌ಸ್ಟಾಗ್ರಾಂ, ಫೇಸ್‌ಬುಕ್‌, ನೆಟ್‌ಫ್ಲಿಕ್ಸ್‌ ಪಾಸ್‌ವರ್ಡ್‌, ಯೂಸರ್‌ನೇಮ್‌ಗಳು ಸೋರಿಕೆ ಆಗಿವೆ ಎಂದು ‘ಎಕ್ಸ್‌ಪ್ರೆಸ್‌ವಿಪಿಎನ್‌’ ಪ್ರಕಟಿಸಿರುವ ವರದಿಯೊಂದರಲ್ಲಿ ಆರೋಪಿಸಲಾಗಿದೆ.

ಸೈಬರ್‌ ಭದ್ರತೆ ಸಂಶೋಧಕ ಜೆರೆಮಿಯಾ ಫೌಲರ್ ಅವರು ಪ್ರಕಟಿಸಿರುವ ವರದಿಯಲ್ಲಿ ಈ ವಿಷಯ ಉಲ್ಲೇಖವಾಗಿದೆ. ಜಿಮೇಲ್‌ನ 4.8 ಕೋಟಿ ಖಾತೆಗಳು, 40 ಲಕ್ಷ ಯಾಹೂ ಖಾತೆಗಳು, 1.7 ಕೋಟಿ ಫೇಸ್‌ಬುಕ್‌ ಖಾತೆಗಳು, 65 ಲಕ್ಷ ಇನ್‌ಸ್ಟಾಗ್ರಾಂ ಖಾತೆಗಳು, 34 ಲಕ್ಷ ನೆಟ್‌ಫ್ಲಿಕ್ಸ್‌ ಖಾತೆಗಳು, 15 ಲಕ್ಷ ಔಟ್‌ಲುಕ್‌ ಖಾತೆಗಳ ವಿವರ ಸೋರಿಕೆ ಆಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ADVERTISEMENT

ಈ ವಿಚಾರವಾಗಿ ಪ್ರಮುಖ ಕಂಪನಿಗಳಿಂದ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ಲಾಗಿನ್ ವಿವರಗಳು ಇರುವ ದತ್ತಾಂಶವು ಎಲ್ಲರಿಗೂ ಲಭ್ಯವಾಗುವಂತೆ ಇದೆ ಎಂದು ಫೌಲರ್ ಅವರು ವರದಿಯಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.