ADVERTISEMENT

ಡಾಲರ್‌ ಮೌಲ್ಯ ಹೆಚ್ಚಳ: ಚಿನ್ನ, ಬೆಳ್ಳಿ ದರ ಇಳಿಕೆ

ಪಿಟಿಐ
Published 4 ಜೂನ್ 2021, 16:17 IST
Last Updated 4 ಜೂನ್ 2021, 16:17 IST
   

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆಯು 10 ಗ್ರಾಂಗೆ ₹ 388ರಷ್ಟು ಕಡಿಮೆ ಆಗಿದೆ. 10 ಗ್ರಾಂ ಚಿನ್ನವು ₹ 47,917ರಂತೆ ಮಾರಾಟ ಆಗಿದೆ. ಬೆಳ್ಳಿಯ ಬೆಲೆಯು ಕಿಲೋ ಗ್ರಾಂಗೆ ₹ 920ರಷ್ಟು ಕಡಿಮೆ ಆಗಿ, ₹ 69,369ರಂತೆ ಮಾರಾಟವಾಗಿದೆ.

ಅಮೆರಿಕದ ಆರ್ಥಿಕತೆಗೆ ಸಂಬಂಧಿಸಿದ ಅಂಕಿ–ಅಂಶಗಳು ಧನಾತ್ಮಕವಾಗಿ ಇರುವ ಕಾರಣ ಡಾಲರ್‌ ಮೌಲ್ಯ ಹೆಚ್ಚಾಯಿತು. ಹೀಗಾಗಿ ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿದೆ ಎಂದು ಮೋತಿಲಾಲ್‌ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್‌ನ ನವನೀತ್ ದಮಾನಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT