ADVERTISEMENT

ಚಿನ್ನ, ಬೆಳ್ಳಿ ದರ ಇಳಿಕೆ

ಪಿಟಿಐ
Published 25 ಆಗಸ್ಟ್ 2020, 14:08 IST
Last Updated 25 ಆಗಸ್ಟ್ 2020, 14:08 IST
ಚಿನ್ನ
ಚಿನ್ನ   

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಮಂಗಳವಾರ ಚಿನ್ನ, ಬೆಳ್ಳಿ ದರ ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ದರ ₹ 557ರಷ್ಟು ಇಳಿಕೆಯಾಗಿದ್ದು, ₹ 52,350ರಂತೆ ಮಾರಾಟವಾಯಿತು.

ಬೆಳ್ಳಿ ಕೆ.ಜಿ.ಗೆ ₹ 1,606ರಷ್ಟು ಇಳಿಕೆಯಾಗಿ, ₹ 68,342ರಂತೆ ಮಾರಾಟವಾಗಿದೆ.

‘ಡಾಲರ್‌ ಮೌಲ್ಯ ಇಳಿಕೆ ಹಾಗೂ ಕೋವಿಡ್‌–19 ಕಾಯಿಲೆಗೆ ಲಸಿಕೆ ಲಭ್ಯವಾಗುವ ಭರವಸೆಯು ಚಿನ್ನದ ದರದಲ್ಲಿ ಅಸ್ಥಿರತೆಗೆ ಕಾರಣವಾಯಿತು’ ಎಂದು 'ಮೋತಿಲಾಲ್‌ ಓಸ್ವಾಲ್‌ ಫೈನಾನ್ಶಿಯಲ್‌ ಸರ್ವೀಸಸ್'‌ನ ಉಪಾಧ್ಯಕ್ಷ ನವ್‌ನೀತ್‌ ದಮನಿ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.