
ಪಿಟಿಐ
ಮುಂಬೈ: ಮುಂದಿನ ಒಂದು ವರ್ಷದಲ್ಲಿ 10 ಗ್ರಾಂ ಚಿನ್ನದ ದರವು ₹1.85 ಲಕ್ಷಕ್ಕೆ ತಲುಪಲಿದೆ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್ ಲಿಮಿಟೆಡ್ (ಎಫ್‌ಒಎಫ್‌ಎಸ್‌ಎಲ್) ವರದಿ ಅಂದಾಜಿಸಿದೆ.
ಡಾಲರ್ ಮೌಲ್ಯದಲ್ಲಿನ ಇಳಿಕೆಯಿಂದ ಚಿನ್ನವು ದರವು ಏರಿಕೆಯ ಹಾದಿಯಲ್ಲಿದೆ ಎಂದು ಹೇಳಿದೆ.
‘ಪೂರ್ವ ಯುರೋಪ್, ಪಶ್ಚಿಮ ಏಷ್ಯಾ ಮತ್ತು ಏಷ್ಯಾದಲ್ಲಿ ಹೆಚ್ಚುತ್ತಿರುವ ರಾಜಕೀಯ ಬಿಕ್ಕಟ್ಟು, ವ್ಯಾಪಾರದಲ್ಲಿನ ಬಿಕ್ಕಟ್ಟು ಮತ್ತು ಸುಂಕ ಸಂಬಂಧಿತ ಅಡಚಣೆಗಳು ಹಣದುಬ್ಬರ ಮತ್ತು ಕರೆನ್ಸಿ ಚಂಚಲತೆ ಹೆಚ್ಚಿಸಿವೆ. ಈ ಬೆಳವಣಿಗೆಗಳು ಅನಿಶ್ಚಿತ ಸಮಯದಲ್ಲಿ ಚಿನ್ನವನ್ನು ವಿಶ್ವಾಸಾರ್ಹ ಹೂಡಿಕೆಯಾಗಿಸಿವೆ’ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವಿಸಸ್ ಲಿಮಿಟೆಡ್‌ನ ಸರಕುಗಳ ಸಂಶೋಧನಾ ಮುಖ್ಯಸ್ಥ ನವನೀತ್ ದಮಾನಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.