ADVERTISEMENT

ಚಿನ್ನ ₹ 119ರಷ್ಟು ಏರಿಕೆ, ಬೆಳ್ಳಿ ₹ 258ರಷ್ಟು ಇಳಿಕೆ

ಪಿಟಿಐ
Published 21 ಮೇ 2021, 12:35 IST
Last Updated 21 ಮೇ 2021, 12:35 IST
ಚಿನ್ನ– ಪ್ರಾತಿನಿಧಿಕ ಚಿತ್ರ
ಚಿನ್ನ– ಪ್ರಾತಿನಿಧಿಕ ಚಿತ್ರ   

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಶುಕ್ರವಾರ ಚಿನ್ನದ ದರ 10ಗ್ರಾಂಗೆ ₹ 119ರಷ್ಟು ಏರಿಕೆ ಆಗಿದ್ದು, ₹ 47,995ರಂತೆ ಮಾರಾಟವಾಗಿದೆ. ಆದರೆ, ಬೆಳ್ಳಿ ಧಾರಣೆ ಕೆ.ಜಿ.ಗೆ ₹ 258ರಷ್ಟು ಇಳಿಕೆ ಆಗಿದ್ದು ₹ 71,256ರಂತೆ ಮಾರಾಟವಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆಗೆ ಅನುಗುಣವಾಗಿ ದೇಶಿ ಮಾರುಕಟ್ಟೆಯಲ್ಲಿಯೂ ದರ ಹೆಚ್ಚಾಗಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.