ADVERTISEMENT

ಚಿನ್ನದ ಬೆಲೆ: ಸಾರ್ವಕಾಲಿಕ ಗರಿಷ್ಠ: 10 ಗ್ರಾಂಗೆ ₹ 50,920

ಪಿಟಿಐ
Published 22 ಜುಲೈ 2020, 14:44 IST
Last Updated 22 ಜುಲೈ 2020, 14:44 IST
ಚಿನ್ನ
ಚಿನ್ನ   

ನವದೆಹಲಿ: ದೇಶದ ರಾಜಧಾನಿಯ ಚಿನಿವಾರ ಪೇಟೆಯಲ್ಲಿ ಬುಧವಾರ ಚಿನ್ನದ ಧಾರಣೆ ದಾಖಲೆಯ ಮಟ್ಟದ ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ ₹ 430ರಷ್ಟು ಏರಿಕೆ ಕಂಡ ಚಿನ್ನವು, ₹ 50,920ಕ್ಕೆ ತಲುಪಿತು.

‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಹೆಚ್ಚಾಗಿದೆ. ಇದರಿಂದಾಗಿ ದೇಶದ ಚಿನಿವಾರ ಪೇಟೆಯಲ್ಲಿ ಬೆಲೆ ಗರಿಷ್ಠ ಮಟ್ಟಕ್ಕೆ ತಲುಪಿದೆ’ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಹಿರಿಯ ವಿಶ್ಲೇಷಕ ತಪನ್‌ ಪಟೇಲ್‌ ತಿಳಿಸಿದ್ದಾರೆ. ಹಿಂದಿನ ದಿನದ ವಹಿವಾಟಿನಲ್ಲಿ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ ₹ 50,490 ಆಗಿತ್ತು.

ಅಮೆರಿಕದಲ್ಲಿ ಕೋವಿಡ್–19 ಪ್ರಕರಣಗಳು ಹೆಚ್ಚಾಗುತ್ತಲೇ ಇರುವುದರಿಂದ ಸುರಕ್ಷಿತ ಹೂಡಿಕೆ ಮಾರ್ಗವಾದ ಚಿನ್ನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಬೆಳ್ಳಿಗೂ ಬೇಡಿಕೆ ಹೆಚ್ಚಾಗುತ್ತಿದ್ದು, ಬುಧವಾರ ₹ 2,550ರಂತೆ ಹೆಚ್ಚಳ ಕಂಡು ಒಂದು ಕೆ.ಜಿ. ಬೆಳ್ಳಿಯ ಧಾರಣೆ ₹ 60,400ಕ್ಕೆ ತಲುಪಿದೆ.

ADVERTISEMENT

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಒಂದು ಔನ್ಸ್‌ಗೆ (28.34 ಗ್ರಾಂ) 1,855 ಡಾಲರ್‌ಗೆ ತಲುಪಿದ್ದು, 9 ವರ್ಷಗಳ ಬಳಿಕ ಈ ಏರಿಕೆ ಕಂಡಿದೆ. ‌

ಬೆಳ್ಳಿ ಒಂದು ಔನ್ಸ್‌ಗೆ 21.80 ಡಾಲರ್‌ಗೆ ತಲುಪಿದ್ದು, ಇದು ಸಹ ಏಳು ವರ್ಷಗಳ ಬಳಿಕ ಗರಿಷ್ಠ ಮಟ್ಟವಾಗಿದೆ.

‘ಚಿನ್ನದ ದರ ಏರಿಕೆಗೆ ಕಡಿವಾಣ ಬೀಳಬೇಕಾದರೆ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಆಗುವುದರ ಜತೆಗೆ ಆರ್ಥಿಕತೆಯೂ ಚೇತರಿಸಿಕೊಳ್ಳುವ ಅಗತ್ಯವಿದೆ’ ಎಂದು ಇಂಗ್ಲೆಂಡ್‌ನ ಸಿಎಂಸಿ ಮಾರುಕಟ್ಟೆಯ ಮುಖ್ಯ ವಿಶ್ಲೇಷಕ ಮೈಕೆಲ್‌ ಹೆವ್ಸನ್‌ ಅಭಿಪ್ರಾಯಪಟ್ಟಿದ್ದಾರೆ.

ಜುಲೈ ತಿಂಗಳ ಏರಿಳಿತ (₹/10ಗ್ರಾಂಗೆ)

22;50,920

21;50,214

20;49,916

17;49,729

16;49,986

15;50,230

14;49,996

13;49,960

10;49,959

9;50,184

8;49,898

7;49,228

6;48,964

3;49,022

2;49,135

1;49,908

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.