ADVERTISEMENT

ಚಿನ್ನದ ಆಮದು ಹೆಚ್ಚಳ

ಪಿಟಿಐ
Published 19 ಅಕ್ಟೋಬರ್ 2018, 17:12 IST
Last Updated 19 ಅಕ್ಟೋಬರ್ 2018, 17:12 IST

ನವದೆಹಲಿ: 2018–19ನೇ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಚಿನ್ನದ ಆಮದು ಶೇ 4ರಷ್ಟು ಹೆಚ್ಚಾಗಿದ್ದು ವ್ಯಾಪಾರ ಕೊರತೆ ಅಂತರವನ್ನು ಹೆಚ್ಚಿಸಿದೆ.

2017–18ನೇ ಹಣಕಾಸು ವರ್ಷದ ಏಪ್ರಿಲ್‌–ಸೆಪ್ಟೆಂಬರ್ ಅವಧಿಯಲ್ಲಿ ₹ 1.23 ಲಕ್ಷ ಕೋಟಿ ಮೌಲ್ಯದ ಚಿನ್ನ ಆಮದಾಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ₹ 1.28 ಲಕ್ಷ ಕೋಟಿಗೆ ಏರಿಕೆಯಾಗಿದೆ.

ಚಿನ್ನದ ಆಮದು ಹೆಚ್ಚಾಗಿರುವುದರಿಂದ ವ್ಯಾಪಾರ ಕೊರತೆ ಅಂತರ ₹ 5.59 ಲಕ್ಷ ಕೋಟಿಯಿಂದ ₹ 6.88 ಲಕ್ಷ ಕೋಟಿಗೆ ಏರಿಕೆಯಾಗಿದೆ. ವಿದೇಶಿ ವಿನಿಮಯದ ಒಳಹರಿವು ಮತ್ತು ಹೊರಹರಿವಿನಿ ಅಂತರವಾದಚಾಲ್ತಿ ಖಾತೆ ಕೊರತೆಯೂ (ಸಿಎಡಿ) ಒಟ್ಟಾರೆ ಜಿಡಿಪಿಯ ಶೇ 2.4ರಷ್ಟಾಗಿದೆ.

ADVERTISEMENT

ಭಾರತಕ್ಕೆ ಪ್ರತಿ ವರ್ಷವೂ 800 ರಿಂದ 900 ಟನ್‌ಗಳಷ್ಟು ಚಿನ್ನ ಆಮದಾಗುತ್ತಿದೆ. ಆಗಸ್ಟ್‌ನಲ್ಲಿ ಚಿನ್ನದ ಆಮದು ಪ್ರಮಾಣ
ಶೇ 51ರಷ್ಟು ಗರಿಷ್ಠ ಏರಿಕೆ ಕಂಡಿದ್ದು, ₹ 18,980 ಕೋಟಿ ಮೌಲ್ಯದ ಚಿನ್ನ ಆಮದಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.