ADVERTISEMENT

ಚಿನ್ನದ ಆಮದು ಶೇ 9ರಷ್ಟು ಇಳಿಕೆ

ಪಿಟಿಐ
Published 17 ಫೆಬ್ರುವರಿ 2020, 2:09 IST
Last Updated 17 ಫೆಬ್ರುವರಿ 2020, 2:09 IST
ಚಿನ್ನ
ಚಿನ್ನ   

ನವದೆಹಲಿ: ಚಿನ್ನದ ಆಮದು ಏಪ್ರಿಲ್‌–ಜನವರಿ ಅವಧಿಯಲ್ಲಿ ಶೇ 9ರಷ್ಟು ಕಡಿಮೆ ಆಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದೆ.

ಚಿನ್ನದ ಆಮದು ಇಳಿಕೆ ಆಗಿರುವುದರಿಂದ ದೇಶದ ವ್ಯಾಪಾರ ಕೊರತೆ ಅಂತರ ₹ 11.59 ಲಕ್ಷ ಕೋಟಿಗಳಿಂದ ₹9.46 ಲಕ್ಷ ಕೋಟಿಗೆ ಇಳಿಕೆಯಾಗಿದೆ.

2019ರ ಜುಲೈನಿಂದಲೂ ಚಿನ್ನದ ಆಮದು ಪ್ರಮಾಣ ಕಡಿಮೆಯಾಗುತ್ತಲೇ ಇದೆ. ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಮಾತ್ರವೇ ಏರಿಕೆ ಕಂಡಿತ್ತು.

ADVERTISEMENT

ಚಿನ್ನದ ಆಮದು ನಿರ್ಬಂಧಿಸುವ ಮೂಲಕ ಚಾಲ್ತಿ ಖಾತೆ ಕೊರತೆ ತಗ್ಗಿಸಲು ಸರ್ಕಾರ ಆಮದು ಸುಂಕವನ್ನು ಶೇ 10 ರಿಂದ ಶೇ 12.5ಕ್ಕೆ ಏರಿಕೆ ಮಾಡಿದೆ.

ಹರಳು ಮತ್ತು ಚಿನ್ನಾಭರಣ ರಫ್ತು ಏಪ್ರಿಲ್‌–ಜನವರಿಯಲ್ಲಿ ಶೇ 1.45ರಷ್ಟು ಕಡಿಮೆಯಾಗಿದೆ.

2018–19ರಲ್ಲಿ ಚಿನ್ನದ ಆಮದು ಶೇ 3ರಷ್ಟು ಕಡಿಮೆ ಆಗಿತ್ತು. ದೇಶದ ವಾರ್ಷಿಕ ಬೇಡಿಕೆ 900 ಟನ್‌ಗಳಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.