ADVERTISEMENT

ಅಕ್ಟೋಬರ್‌ನಲ್ಲಿ ಚಿನ್ನದ ಆಮದು ಶೇ 200ರಷ್ಟು ಹೆಚ್ಚಳ: ಕೇಂದ್ರ ಸರ್ಕಾರ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 15:24 IST
Last Updated 17 ನವೆಂಬರ್ 2025, 15:24 IST
   

ನವದೆಹಲಿ: ದೇಶದ ಚಿನ್ನದ ಆಮದು ಅಕ್ಟೋಬರ್‌ ತಿಂಗಳಿನಲ್ಲಿ ಶೇ 200ರಷ್ಟು ಹೆಚ್ಚಳವಾಗಿದ್ದು, ₹1.30 ಲಕ್ಷ ಕೋಟಿಯಷ್ಟಾಗಿದೆ. ಬೆಳ್ಳಿಯ ಆಮದು ಶೇ 528ರಷ್ಟು ಏರಿಕೆಯಾಗಿದ್ದು, ₹24 ಸಾವಿರ ಕೋಟಿಯಾಗಿದೆ ಎಂದು ಸರ್ಕಾರ ತಿಳಿಸಿದೆ.

ಹಬ್ಬದ ಋತು ಮತ್ತು ಮದುವೆ ಅಂಗವಾಗಿ ಚಿನ್ನ ಮತ್ತು ಬೆಳ್ಳಿಗೆ ಬೇಡಿಕೆ ಹೆಚ್ಚಳವಾಯಿತು. ಇದರಿಂದ ಆಮದು ಏರಿಕೆಯಾಗಿದೆ ಎಂದು ತಿಳಿಸಿದೆ. 2024ರ ಅಕ್ಟೋಬರ್‌ನಲ್ಲಿ ₹43,588 ಕೋಟಿಯಷ್ಟು ಮೌಲ್ಯದ ಚಿನ್ನ ಆಮದಾಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿಗೆ ಮೂರು ಪಟ್ಟು ಹೆಚ್ಚಳವಾಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT