ADVERTISEMENT

ಚಿನ್ನದ ದರ ₹450 ಹೆಚ್ಚಳ

ಪಿಟಿಐ
Published 23 ಮಾರ್ಚ್ 2023, 13:00 IST
Last Updated 23 ಮಾರ್ಚ್ 2023, 13:00 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಗುರುವಾರ ಚಿನ್ನದ ದರ 10ಗ್ರಾಂಗೆ ₹450ರಷ್ಟು ಹೆಚ್ಚಾಗಿ ₹59,350ಕ್ಕೆ ತಲುಪಿತು. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಹೆಚ್ಚಾಗಿರುವುದೇ ಇದಕ್ಕೆ ಕಾರಣ ಎಂದು ಎಚ್‌ಡಿಎಫ್‍ಸಿ ಸೆಕ್ಯುರಿಟೀಸ್‌ ತಿಳಿಸಿದೆ.

ಬೆಳ್ಳಿ ಧಾರಣೆ ಕೆ.ಜಿಗೆ ₹815ರಷ್ಟು ಏರಿಕೆ ಕಂಡು ₹69,800ರಂತೆ ಮಾರಾಟವಾಯಿತು.

ಮಾರುಕಟ್ಟೆಯ ನಿರೀಕ್ಷೆಯಂತೆಯೇ ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಫೆಡರಲ್‌ ರಿಸರ್ವ್‌ ಬಡ್ಡಿದರವನ್ನು ಶೇ 0.25ರಷ್ಟು ಹೆಚ್ಚಳ ಮಾಡಿದೆ. ಈ ಬೆಳವಣಿಗೆಯು ಚಿನ್ನದ ದರ ಹೆಚ್ಚಳಕ್ಕೆ ಕಾರಣವಾಯಿತು. ದೇಶದ ಹಣಕಾಸು ವಲಯದಲ್ಲಿನ ಈಚಿನ ಬಿಕ್ಕಟ್ಟನ್ನು ಗಮನದಲ್ಲಿ ಇಟ್ಟುಕೊಂಡು ಭವಿಷ್ಯದಲ್ಲಿ ಬಡ್ಡಿದರ ಹೆಚ್ಚಿಸುವ ಪ್ರವೃತ್ತಿಗೆ ತುಸು ವಿರಾಮ ನೀಡುವ ಸೂಚನೆಯನ್ನು ಅದು ನೀಡಿದೆ ಎಂದು ಮೋತಿಲಾಲ್‌ ಓಸ್ವಾಲ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಹಿರಿಯ ಉಪಾಧ್ಯಕ್ಷ ನವ್‌ನೀತ್‌ ದಮಾನಿ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.