ಚಿನ್ನ, ಬೆಳ್ಳಿ
ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತ ಕಂಡಿದ್ದರಿಂದ ಚಿನ್ನದ ದರ ₹1,800ರಷ್ಟು ಇಳಿಕೆಯಾಗಿದ್ದು, ಪ್ರತಿ 10 ಗ್ರಾಂ ಅಪರಂಜಿ ಬೆಲೆ ₹95,050ರಷ್ಟು ಗುರುವಾರ ದಾಖಲಾಗಿದೆ ಎಂದು ಅಖಿಲ ಭಾರತ ಸರಾಫ್ ಒಕ್ಕೂಟ ಹೇಳಿದೆ.
ಶೇ 99.9 ಮತ್ತು ಶೇ 99.5ರಷ್ಟು ಶುದ್ಧತೆ ಇರುವ 10 ಗ್ರಾಂ ಚಿನ್ನದ ಬೆಲೆ ಬುಧವಾರ ಕ್ರಮವಾಗಿ ₹96,850 ಹಾಗೂ ₹96.400 ಇತ್ತು.
‘ಅಮೆರಿಕ ಮತ್ತು ಚೀನಾ ನಡುವಿನ ಸುಂಕದ ಸಮರಕ್ಕೆ 90 ದಿನಗಳ ವಿರಾಮ ನೀಡಿದ ಬೆನ್ನಲ್ಲೇ ಹೂಡಿಕೆದಾರರು ಹಳದಿ ಲೋಹದಿಂದ ಬೇರೆಡೆ ಮುಖ ಮಾಡಿದ್ದಾರೆ’ ಎಂದು ಅಬನ್ಸ್ ಹಣಕಾಸು ಸೇವೆಯ ಸಿಇಒ ಚಿಂತನ್ ಮೆಹ್ತಾ ಹೇಳಿದ್ದಾರೆ.
ಬೆಳ್ಳಿ ಬೆಲೆಯೂ ಸತತ ನಾಲ್ಕನೇ ದಿನವಾದ ಗುರುವಾರವೂ ಕುಸಿತ ದಾಖಲಿಸಿದೆ. ಪ್ರತಿ ಕೆ.ಜಿ. ಬೆಳ್ಳಿಗೆ ₹97 ಸಾವಿರದಷ್ಟು ದಾಖಲಾಗಿದೆ. ಬುಧವಾರ ಬೆಳ್ಳಿ ದರ ₹98 ಸಾವಿರ ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.