ADVERTISEMENT

Gold Price | ಚಿನ್ನದ ಬೆಲೆ ₹650 ಇಳಿಕೆ

ಪಿಟಿಐ
Published 14 ಮೇ 2025, 13:10 IST
Last Updated 14 ಮೇ 2025, 13:10 IST
ಚಿನ್ನದ ಬೆಲೆ ಇಳಿಕೆ
ಚಿನ್ನದ ಬೆಲೆ ಇಳಿಕೆ   

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಬುಧವಾರ ಚಿನ್ನದ ಧಾರಣೆಯು ಇಳಿಕೆಯಾಗಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್‌ ತಿಳಿಸಿದೆ.

10 ಗ್ರಾಂ ಚಿನ್ನದ (ಶೇ 99.9 ಪರಿಶುದ್ಧತೆ) ಬೆಲೆಯು ₹650 ಇಳಿಕೆಯಾಗಿದ್ದು, ₹96,850 ಆಗಿದೆ. ಆಭರಣ ಚಿನ್ನದ (ಶೇ 99.5 ಪರಿಶುದ್ಧತೆ) ದರವು ₹700 ಇಳಿಕೆಯಾಗಿದ್ದು, ₹96,400ಕ್ಕೆ ಮಾರಾಟವಾಗಿದೆ ಎಂದು ತಿಳಿಸಿದೆ.

‘ಸುಂಕಕ್ಕೆ ಸಂಬಂಧಿಸಿದಂತೆ ಅಮೆರಿಕದ ಜೊತೆಗೆ ಹಲವು ರಾಷ್ಟ್ರಗಳು ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲು ಮುಂದಾಗಿವೆ. ಚೀನಾ ಕೂಡ ಇದೇ ಹಾದಿ ತುಳಿದಿದೆ. ಇದು ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರಿದೆ’ ಎಂದು ಅಬಾನ್ಸ್ ಫೈನಾನ್ಶಿಯಲ್ ಸರ್ವಿಸಸ್‌ನ ಸಿಇಒ ಚೇತನ್‌ ಮೆಹ್ತಾ ಹೇಳಿದ್ದಾರೆ.

ADVERTISEMENT

ಆದರೆ, ಪಶ್ಚಿಮ ಏಷ್ಯಾದಲ್ಲಿ ತಲೆದೋರಿರುವ ಬಿಕ್ಕಟ್ಟು ಇನ್ನೂ ಶಮನಗೊಂಡಿಲ್ಲ. ಇದು ಹಳದಿ ಲೋಹದ ಬೆಲೆ ಏರಿಕೆಗೆ ಕಾರಣವಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಸತತ ಮೂರನೇ ದಿನವೂ ಬೆಳ್ಳಿ ಧಾರಣೆಯು ಇಳಿಕೆಯಾಗಿದೆ. ಪ್ರತಿ ಕೆ.ಜಿಗೆ ₹1,450 ಇಳಿಕೆಯಾಗಿದ್ದು, ₹98 ಸಾವಿರ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.