ADVERTISEMENT

ಚಿನ್ನದ ಬೆಲೆ 10 ಗ್ರಾಂಗೆ ₹3,500, ಬೆಳ್ಳಿ ಬೆಲೆ ಕೆ.ಜಿ.ಗೆ ₹5,800 ಹೆಚ್ಚಳ

ಪಿಟಿಐ
Published 25 ನವೆಂಬರ್ 2025, 14:11 IST
Last Updated 25 ನವೆಂಬರ್ 2025, 14:11 IST
<div class="paragraphs"><p>ಚಿನ್ನ</p></div>

ಚಿನ್ನ

   

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಮಂಗಳವಾರ ನಡೆದ ವಹಿವಾಟಿನಲ್ಲಿ ಚಿನ್ನದ ಬೆಲೆಯು 10 ಗ್ರಾಂಗೆ ₹3,500ರಷ್ಟು ಹೆಚ್ಚಾಗಿದ್ದು ₹1,28,900ಕ್ಕೆ ತಲುಪಿದೆ.

ಮದುವೆಗಳ ಋತು ಶುರುವಾಗುತ್ತಿರುವ ಕಾರಣದಿಂದಾಗಿ ಸ್ಥಳೀಯ ಚಿನ್ನಾಭರಣ ಅಂಗಡಿಗಳ ಪ್ರತಿನಿಧಿಗಳು ಚಿನ್ನವನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿರುವುದು ಕೂಡ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.

ADVERTISEMENT

ಶೇ 99.5ರಷ್ಟು ಶುದ್ಧತೆಯ ಆಭರಣ ಚಿನ್ನದ ಬೆಲೆಯು 10 ಗ್ರಾಂ ₹3,500ರಷ್ಟು ಹೆಚ್ಚಾಗಿ ₹1,28,300ಕ್ಕೆ ತಲುಪಿದೆ.

ಬೆಳ್ಳಿಯ ಖರೀದಿ ಕೂಡ ಹೆಚ್ಚಾಗಿದ್ದು ಬೆಲೆಯು ಕೆ.ಜಿ.ಗೆ ₹5,800ರಷ್ಟು ಹೆಚ್ಚಳ ಕಂಡಿದೆ. ಕೆ.ಜಿ. ಬೆಳ್ಳಿಯ ಬೆಲೆಯು ₹1,60,800 ಆಗಿದೆ. ವಿಶ್ವದ ಪ್ರಮುಖ ಕರೆನ್ಸಿಗಳ ಎದುರು ಡಾಲರ್‌ ಮೌಲ್ಯ ಇಳಿಕೆ ಆಗಿದ್ದುದರ ಪರಿಣಾಮವಾಗಿ ಹೂಡಿಕೆದಾರರು ಅಮೂಲ್ಯ ಲೋಹಗಳ ಮೇಲೆ ಹೆಚ್ಚು ಹೂಡಿಕೆ ಮಾಡಲು ಮುಂದಾಗಿದ್ದುದು ಕೂಡ ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಗೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.