ADVERTISEMENT

ಚಿನ್ನದ ದರ ₹497 ಏರಿಕೆ

ಪಿಟಿಐ
Published 6 ಅಕ್ಟೋಬರ್ 2022, 10:56 IST
Last Updated 6 ಅಕ್ಟೋಬರ್ 2022, 10:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಗುರುವಾರ ಚಿನ್ನದ ದರ 10 ಗ್ರಾಂಗೆ ₹497ರಷ್ಟು ಏರಿಕೆ ಕಂಡು ₹52,220ರಂತೆ ಮಾರಾಟವಾಯಿತು. ಆದರೆ, ಬೆಳ್ಳಿ ಧಾರಣೆ ಕೆ.ಜಿಗೆ ₹ 80 ಇಳಿಕೆ ಕಂಡು ₹61,605ಕ್ಕೆ ತಲುಪಿತು.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆ ಮತ್ತು ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ ಇಳಿಕೆಯಿಂದಾಗಿ ದೇಶದಲ್ಲಿ ಚಿನ್ನದ ದರ ಹೆಚ್ಚಾಗಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT