ADVERTISEMENT

ಚಿನ್ನದ ಬೆಲೆ ಗಗನಮುಖಿ: 10 ಗ್ರಾಂಗೆ ₹1.40 ಲಕ್ಷ

ಪಿಟಿಐ
Published 23 ಡಿಸೆಂಬರ್ 2025, 13:32 IST
Last Updated 23 ಡಿಸೆಂಬರ್ 2025, 13:32 IST
<div class="paragraphs"><p>ಚಿನ್ನ, ಬೆಳ್ಳಿ ಬೆಲೆ ಏರಿಕೆ (ಪ್ರಾತಿನಿಧಿಕ ಚಿತ್ರ)</p></div>

ಚಿನ್ನ, ಬೆಳ್ಳಿ ಬೆಲೆ ಏರಿಕೆ (ಪ್ರಾತಿನಿಧಿಕ ಚಿತ್ರ)

   

ನವದೆಹಲ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಮಂಗಳವಾರ ನಡೆದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯಲ್ಲಿ ಏರಿಕೆ ಆಗಿದೆ.

10 ಗ್ರಾಂ ಚಿನ್ನದ (ಶೇ 99.9ರಷ್ಟು ಪರಿಶುದ್ಧತೆ) ದರವು ₹2,650 ಹೆಚ್ಚಳವಾಗಿ, ₹1,40,850ರಂತೆ ಮಾರಾಟವಾಗಿದೆ.

ADVERTISEMENT

ಬೆಳ್ಳಿ ದರವು ಕೆ.ಜಿಗೆ ₹2,750 ಏರಿಕೆಯಾಗಿ, ₹2,17,250ಕ್ಕೆ ತಲುಪಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.

ಕಳೆದ ಡಿಸೆಂಬರ್ 31ರಂದು 10 ಗ್ರಾಂ ಚಿನ್ನದ ದರವು ₹78,950 ಇತ್ತು. ಇದುವರೆಗೆ ₹61,900 ಏರಿಕೆ (ಶೇ 78.40ರಷ್ಟು) ಆಗಿದೆ.

ಕೆ.ಜಿ ಬೆಳ್ಳಿ ದರವು 2024ರ ಡಿಸೆಂಬರ್‌ 31ರಂದು ₹89,700 ಇತ್ತು. ಇದುವರೆಗೆ ₹1,27,550 ಹೆಚ್ಚಳ (ಶೇ 142) ಆಗಿದೆ.

‘ಅಮೆರಿಕದ ಫೆಡರಲ್‌ ರಿಸರ್ವ್‌ ಬಡ್ಡಿ ದರ ಕಡಿತ ಮಾಡುವ ನಿರೀಕ್ಷೆ, ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ರಾಜಕೀಯ ಬಿಕ್ಕಟ್ಟಿನಿಂದ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾದ ಚಿನ್ನ ಮತ್ತು ಬೆಳ್ಳಿ ಕಡೆ ಮುಖ ಮಾಡಿದ್ದಾರೆ. ಇದೇ ಬೆಲೆ ಏರಿಕೆಗೆ ಕಾರಣ’ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.