ADVERTISEMENT

ಇಳಿಕೆ ಹಾದಿಯಲ್ಲಿ ಚಿನ್ನದ ಬೆಲೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 19:46 IST
Last Updated 12 ಡಿಸೆಂಬರ್ 2019, 19:46 IST
   

ಬೆಂಗಳೂರು: ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆ ಹಾದಿಯಲ್ಲಿರುವುದು ದೇಶಿ ಚಿನ್ನ ಖರೀದಿದಾರರ ಪಾಲಿಗೆ ಸಂತೋಷದ ಸುದ್ದಿಯಾಗಿದೆ.

ಅಮೆರಿಕ ಮತ್ತು ಚೀನಾ ನಡುವಣ ಉದ್ವಿಗ್ನ ವಾತಾವರಣ ತಿಳಿಯಾಗಿ ಎರಡೂ ದೇಶಗಳು ವಾಣಿಜ್ಯ ಒಪ್ಪಂದಕ್ಕೆ ಬರುವ ಸಾಧ್ಯತೆ ಕಂಡು ಬರುತ್ತಿದೆ. ಇದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಧಾರಣೆ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತಿದೆ.

ಸೆಪ್ಟೆಂಬರ್‌ ತಿಂಗಳಿನಿಂದೀಚೆಗೆ ಪ್ರತಿ ಔನ್ಸ್‌ ಬೆಲೆ ಶೇ 5.47ರಷ್ಟು ಕಡಿಮೆಯಾಗಿ 1,475 ಡಾಲರ್‌ಗೆ (₹ 1,03,250) ಇಳಿಕೆಯಾಗಿದೆ. ಅದಕ್ಕೂ ಹಿಂದೆ ಪ್ರತಿ ಔನ್ಸ್‌ ಬೆಲೆಯು ₹ 1.12 ಲಕ್ಷದಷ್ಟಿತ್ತು.

ADVERTISEMENT

ಅಂತರರಾಷ್ಟ್ರೀಯ ಮಾರುಕಟ್ಟೆ ಬೆಲೆಯು ದೇಶಿ ಚಿನಿವಾರ ಪೇಟೆಯ ಬೆಲೆ ನಿಗದಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಕಳೆದ ಮೂರು ವಹಿವಾಟಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಚಿನ್ನದ ದರ ₹ 38,800 ರಿಂದ ₹ 39,050ರ ಮಧ್ಯೆ ಏರುಪೇರು ಕಾಣುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.