ADVERTISEMENT

ಚಿನ್ನದ ದರ ₹111 ಏರಿಕೆ, ಬೆಳ್ಳಿ ₹67 ಇಳಿಕೆ

ಪಿಟಿಐ
Published 20 ಫೆಬ್ರುವರಿ 2020, 13:05 IST
Last Updated 20 ಫೆಬ್ರುವರಿ 2020, 13:05 IST
ಚಿನ್ನದ ಬಿಸ್ಕತ್‌ –ಸಂಗ್ರಹ ಚಿತ್ರ
ಚಿನ್ನದ ಬಿಸ್ಕತ್‌ –ಸಂಗ್ರಹ ಚಿತ್ರ   

ನವದೆಹಲಿ: ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ ಪ್ರಕಾರ, ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಧಾರಣೆಯು ತಲಾ 10 ಗ್ರಾಂಗೆ ₹111ರವರೆಗೂ ಏರಿಕೆಯಾಗಿದೆ.

ಬುಧವಾರದ ವಹಿವಾಟಿನಲ್ಲಿ ದೆಹಲಿಯಲ್ಲಿ 10 ಗ್ರಾಂಗೆ ₹42,381 ತಲುಪಿದ್ದ ಚಿನ್ನದ ದರ, ಗುರುವಾರ ₹42,492 ಆಗಿದೆ.

₹48,666 ಇದ್ದ ಪ್ರತಿ ಕೆಜಿ ಬೆಳ್ಳಿ ದರ, ₹67 ಇಳಿಕೆಯಾಗಿ ₹48,599 ಆಗಿದೆ.

ADVERTISEMENT

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್‌ (28.34 ಗ್ರಾಂ) ಚಿನ್ನ 1,609.60 ಡಾಲರ್‌ ಹಾಗೂ ಪ್ರತಿ ಔನ್ಸ್‌ ಬೆಳ್ಳಿ 18.26 ಡಾಲರ್‌ನಲ್ಲಿ ವಹಿವಾಟು ನಡೆದಿದೆ. ಡಾಲರ್‌ ಎದುರು ರೂಪಾಯಿ ಮೌಲ್ಯ ವಹಿವಾಟು ಆರಂಭದಲ್ಲಿ 23 ಪೈಸೆ ಕುಸಿದಿತ್ತು.

ಮದುವೆ ಸಮಾರಂಭದ ಬೇಡಿಕೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಹೆಚ್ಚಾಗಿರುವುದರಿಂದ ದೇಶಿ ಮಾರುಕಟ್ಟೆಯಲ್ಲಿಯೂ ಬೆಲೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.