ADVERTISEMENT

ಚಿನ್ನದ ದರ ₹12,800, ಬೆಳ್ಳಿ ₹52 ಸಾವಿರ ಇಳಿಕೆ

ಪಿಟಿಐ
Published 2 ಫೆಬ್ರುವರಿ 2026, 15:49 IST
Last Updated 2 ಫೆಬ್ರುವರಿ 2026, 15:49 IST
<div class="paragraphs"><p>ಚಿನ್ನ, ಬೆಳ್ಳಿ</p></div>

ಚಿನ್ನ, ಬೆಳ್ಳಿ

   

(ಸಾಂದರ್ಭಿಕ ಚಿತ್ರ)

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಸೋಮವಾರ ನಡೆದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯಲ್ಲಿ ಭಾರಿ ಇಳಿಕೆ ಆಗಿದೆ. ಬೆಳ್ಳಿ ದರವು ಕೆ.ಜಿಗೆ ₹52 ಸಾವಿರ (ಶೇ 17ರಷ್ಟು) ಕಡಿಮೆಯಾಗಿ, ₹2.60 ಲಕ್ಷಕ್ಕೆ ಇಳಿದಿದೆ.

ADVERTISEMENT

10 ಗ್ರಾಂ ಚಿನ್ನದ (ಶೇ 99.9ರಷ್ಟು ಪರಿಶುದ್ಧತೆ) ದರವು ₹12,800 (ಶೇ 7.73ರಷ್ಟು) ಇಳಿಕೆಯಾಗಿ, ₹1,52,700ರಂತೆ ಮಾರಾಟವಾಗಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.

ಕಳೆದ ಮೂರು ವಹಿವಾಟಿನ ದಿನಗಳಲ್ಲಿ ಬೆಳ್ಳಿ ದರದಲ್ಲಿ ₹1,44,500 (ಶೇ 36ರಷ್ಟು) ಇಳಿಕೆ ಆಗಿದೆ. ಚಿನ್ನದ ಬೆಲೆಯು ₹30,300 (ಶೇ 17ರಷ್ಟು) ಕಡಿಮೆ ಆಗಿದೆ.

ಜನವರಿ 29ರಂದು ಬೆಳ್ಳಿ ದರವು ₹4,04,500 ಮತ್ತು ಚಿನ್ನದ ದರವು ₹1.83 ಲಕ್ಷಕ್ಕೆ ಮುಟ್ಟಿತ್ತು. ಇದು ಚಿನ್ನ ಮತ್ತು ಬೆಳ್ಳಿ ಬೆಲೆಯ ಇದುವರೆಗಿನ ಗರಿಷ್ಠ ಮಟ್ಟ. ಲಾಭದ ಗಳಿಕೆಗಾಗಿ ಹೂಡಿಕೆದಾರರು ಚಿನ್ನ ಮತ್ತು ಬೆಳ್ಳಿ ಮಾರಾಟಕ್ಕೆ ಮುಂದಾಗಿದ್ದರಿಂದ ಅಮೂಲ್ಯ ಲೋಹಗಳ ಬೆಲೆ ಇಳಿಕೆ ಆಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.