ADVERTISEMENT

ಬೆಳ್ಳಿಯ ಬೆಲೆ ಕೆ.ಜಿ.ಗೆ ₹44,500 ಜಿಗಿತ; ಚಿನ್ನದ ದರ 10 ಗ್ರಾಂಗೆ ₹7,300 ಏರಿಕೆ

ಪಿಟಿಐ
Published 27 ಜನವರಿ 2026, 16:00 IST
Last Updated 27 ಜನವರಿ 2026, 16:00 IST
   

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಮಂಗಳವಾರ ನಡೆದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯು ದಾಖಲೆ ಬರೆದಿವೆ.

ಶೇಕಡ 99.9ರಷ್ಟು ಪರಿಶುದ್ಧತೆಯ ಚಿನ್ನದ ಬೆಲೆಯು 10 ಗ್ರಾಂಗೆ ₹7,300ರಷ್ಟು ಹೆಚ್ಚಳ ಕಂಡು ₹1,66,000ಕ್ಕೆ ತಲುಪಿದೆ.

ಬೆಳ್ಳಿಯ ಬೆಲೆಯು ಒಂದೇ ದಿನದಲ್ಲಿ ₹44,500ರಷ್ಟು ಏರಿಕೆ ಕಂಡಿದೆ. ಕೆ.ಜಿ. ಬೆಳ್ಳಿಯ ಬೆಲೆಯು ₹3,70,000 ಆಗಿದೆ.

ADVERTISEMENT

ಹೂಡಿಕೆಯ ಉದ್ದೇಶದಿಂದ ಬೆಳ್ಳಿಯನ್ನು ಖರೀದಿಸುವುದು ಹೆಚ್ಚಾಗುತ್ತಿದೆ. ಕೈಗಾರಿಕೆಗಳಿಂದಲೂ ಬೆಳ್ಳಿಗೆ ಉತ್ತಮ ಬೇಡಿಕೆ ಇದೆ. ಹೀಗಾಗಿ ಬೆಲೆ ಹೆಚ್ಚಾಗುತ್ತಿದೆ ಎಂದು ಲೆಮನ್‌ ಮಾರ್ಕೆಟ್‌ ಡೆಸ್ಕ್‌ನ ಸಂಶೋಧನಾ ವಿಶ್ಲೇಷಕ ಗೌರವ್ ಗರ್ಗ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.