ADVERTISEMENT

₹89 ಸಾವಿರ ದಾಟಿದ ಚಿನ್ನದ ದರ: ಬೆಳ್ಳಿ ದರ ಕೆ.ಜಿಗೆ ₹1 ಲಕ್ಷ

ಪಿಟಿಐ
Published 14 ಫೆಬ್ರುವರಿ 2025, 15:39 IST
Last Updated 14 ಫೆಬ್ರುವರಿ 2025, 15:39 IST
<div class="paragraphs"><p>ಚಿನ್ನ, ಬೆಳ್ಳಿ ದರ</p></div>

ಚಿನ್ನ, ಬೆಳ್ಳಿ ದರ

   

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನದ ಧಾರಣೆಯ ನಾಗಾಲೋಟ ಮುಂದುವರಿದಿದೆ. ಶುಕ್ರವಾರದ ವಹಿವಾಟಿನಲ್ಲಿ ₹89,400 ಆಗಿದ್ದು, ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ.

10 ಗ್ರಾಂ ಚಿನ್ನದ ದರವು (ಶೇ 99.9 ಪರಿಶುದ್ಧತೆ) ₹1,300 ಹೆಚ್ಚಳವಾಗಿ, ₹89,400 ಆಗಿದೆ. ಆಭರಣ ಚಿನ್ನವು (ಶೇ 99.5 ಪರಿಶುದ್ಧತೆ) ಇಷ್ಟೇ ಪ್ರಮಾಣದಲ್ಲಿ ಏರಿಕೆಯಾಗಿ, ₹89,000 ಆಗಿದೆ ಎಂದು ಅಖಿಲ ಭಾರತ ಸರಾ‌ಫ್‌ ಅಸೋಸಿಯೇಷನ್ ತಿಳಿಸಿದೆ. 

ADVERTISEMENT

ಬೆಳ್ಳಿ ಧಾರಣೆಯು ಕೆ.ಜಿಗೆ ₹2 ಸಾವಿರ ಏರಿಕೆಯಾಗಿದ್ದು, ನಾಲ್ಕು ತಿಂಗಳ ಗರಿಷ್ಠ ಮಟ್ಟವಾದ ₹1 ಲಕ್ಷಕ್ಕೆ ತಲುಪಿದೆ.

ಡಾಲರ್‌ ಸೂಚ್ಯಂಕ ಇಳಿಕೆ ಹಾಗೂ ಅಮೆರಿಕದ ಸುಂಕ ನೀತಿಯಿಂದಾಗಿ ಹಳದಿ ಲೋಹದ ಬೆಲೆ ಏರಿಕೆಯಾಗುತ್ತಿದೆ ಎಂದು ಎಲ್‌ಕೆಪಿ ಸೆಕ್ಯುರಿಟೀಸ್‌ನ ಹಿರಿಯ ವಿಶ್ಲೇಷಕ ಜತೀನ್ ತ್ರಿವೇದಿ ಹೇಳಿದ್ದಾರೆ.

ಅಮೆರಿಕದ ಚಿಲ್ಲರೆ ಮಾರಾಟದ ದತ್ತಾಂಶ ವರದಿ ಬಿಡುಗಡೆಯಾಗಿದೆ. ಇದು ಚಿನ್ನ ದರದ ಮೇಲೆ ಮತ್ತಷ್ಟು ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.

ಅಮೆರಿಕದ ಸರಕುಗಳ ಮೇಲೆ ಚೀನಾ, ಭಾರತ ಸೇರಿ ಹಲವು ರಾಷ್ಟ್ರಗಳು ಹೆಚ್ಚಿನ ಸುಂಕ ವಿಧಿಸುತ್ತಿವೆ. ಇದಕ್ಕೆ ಪ್ರತಿಯಾಗಿ ಟ್ರಂಪ್‌ ಕೂಡ ಸುಂಕ ಹೆಚ್ಚಿಸುವುದಾಗಿ ಘೋಷಿಸಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ತಲೆದೋರಿದೆ ಎಂದು ತಜ್ಞರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.