ADVERTISEMENT

Goli Soda | ಗೋಲಿ ಸೋಡಾಗೆ ಅಮೆರಿಕ,ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ: ಕೇಂದ್ರ

ಪಿಟಿಐ
Published 23 ಮಾರ್ಚ್ 2025, 11:24 IST
Last Updated 23 ಮಾರ್ಚ್ 2025, 11:24 IST
<div class="paragraphs"><p>ಗೋಲಿ ಸೋಡಾ</p></div>

ಗೋಲಿ ಸೋಡಾ

   

ನವದೆಹಲಿ: ಭಾರತದ ಸಾಂಪ್ರದಾಯಿಕ ಪಾನೀಯವಾದ ಗೋಲಿ ಸೋಡಾಗೆ ಅಮೆರಿಕ ಸೇರಿದಂತೆ ಪ್ರಮುಖ ಜಾಗತಿಕ ಮಾರುಕಟ್ಟೆಯಲ್ಲಿ ಗ್ರಾಹಕರಿಂದ ಬೇಡಿಕೆ ಹೆಚ್ಚಳವಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯದ ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಪಿಇಡಿಎ) ಭಾನುವಾರ ತಿಳಿಸಿದೆ.

ಲುಲು ಹೈಪರ್‌ಮಾರ್ಕೆಟ್‌ ಗಲ್ಫ್‌ ಪ್ರಾಂತ್ಯದ ದೊಡ್ದ ಚಿಲ್ಲರೆ ಮಾರಾಟಗಾರರಲ್ಲಿ ಒಂದಾಗಿದ್ದು, ಗೋಲಿ ಪಾಪ್‌ ಸೋಡಾ ರೀಬ್ರ್ಯಾಂಡ್‌ನಡಿ ಭಾರತ ಮಾರಾಟ ಮಾಡುತ್ತಿದೆ ಎಂದು ತಿಳಿಸಿದೆ.

ADVERTISEMENT

ಒಂದು ಕಾಲದಲ್ಲಿ ಮನೆಯ ಪ್ರಮುಖ ಪಾನೀಯವಾಗಿದ್ದ ಗೋಲಿ ಸೋಡಾ, ಮಾರಾಟದ ವಿಸ್ತರಣೆ ಮತ್ತು ಹೊಸ ಆವಿಷ್ಕಾರಣೆಯಿಂದ ಜಾಗತಿಕ ಮಟ್ಟಕ್ಕೆ ಬೆಳೆದಿದೆ. ಅಮೆರಿಕ, ಬ್ರಿಟನ್‌, ಐರೋಪ್ಯ ಮತ್ತು ಗಲ್ಫ್‌ ರಾಷ್ಟ್ರಗಳಲ್ಲಿ ಈಗಾಗಲೇ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿದೆ ಎಂದು ತಿಳಿಸಿದೆ. 

ಬಹುರಾಷ್ಟ್ರೀಯ ಪಾನೀಯ ಕಂಪನಿಗಳ ಪ್ರಾಬಲ್ಯದಿಂದ ಬಹುತೇಕ ಕಣ್ಮರೆಯಾಗುತ್ತಿದ್ದ ಗೋಲಿ ಸೋಡಾ, ಸರ್ಕಾರದ ಉತ್ತೇಜನ ಮತ್ತು ರಫ್ತಿನಿಂದ ಗೋಲಿ ಸೋಡಾ ಜಾಗತಿಕ ಮಾರುಕಟ್ಟೆಯಲ್ಲಿ ಆಹಾರ ಮತ್ತು ಪಾನೀಯ ಉತ್ಪನ್ನಗಳು ಮಹತ್ವದ ಸ್ಥಾನ ಪಡೆದಿವೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.