ADVERTISEMENT

ನಿಷ್ಕ್ರಿಯ ಗೂಗಲ್ ಖಾತೆಗಳು ಡಿಲೀಟ್: ಗೂಗಲ್ ಕಂಪನಿ

ರಾಯಿಟರ್ಸ್
Published 16 ಮೇ 2023, 16:36 IST
Last Updated 16 ಮೇ 2023, 16:36 IST
   

ಬೆಂಗಳೂರು: ಎರಡು ವರ್ಷಗಳಿಗೂ ಹೆಚ್ಚು ಅವಧಿಯಿಂದ ಬಳಸದ ಗೂಗಲ್ ಖಾತೆಗಳು ಡಿಲೀಟ್ ಆಗಲಿವೆ. ಹ್ಯಾಕಿಂಗ್ ಸೇರಿದಂತೆ ಹಲವು ಬಗೆಯ ಬೆದರಿಕೆಗಳನ್ನು ತಡೆಯುವ ಉದ್ದೇಶದಿಂದ ಗೂಗಲ್ ಕಂಪನಿಯು ಈ ತೀರ್ಮಾನಕ್ಕೆ ಬಂದಿದೆ.

ಎರಡು ವರ್ಷಗಳಲ್ಲಿ ಒಮ್ಮೆಯೂ ಸೈನ್‌ಇನ್‌ ಆಗಿರದ ಖಾತೆಗಳನ್ನು ಗೂಗಲ್ ಡಿಲೀಟ್ ಮಾಡಲಿದೆ. ಜಿಮೇಲ್, ಗೂಗಲ್ ಡಾಕ್ಸ್, ಡ್ರೈವ್, ಮೀಟ್, ಯೂಟ್ಯೂಬ್, ಗೂಗಲ್ ಫೊಟೊಸ್ ಸೇರಿದಂತೆ ಗೂಗಲ್‌ ಖಾತೆಯ ಮೂಲಕ ಗ್ರಾಹಕರು ಬಳಕೆ ಮಾಡುವ ಎಲ್ಲ ಸೇವೆಗಳಲ್ಲಿ ಇರುವ ದತ್ತಾಂಶವನ್ನು ಅಳಿಸಲಾಗುತ್ತದೆ.

ಇದು ವೈಯಕ್ತಿಕ ಬಳಕೆಯ ಗೂಗಲ್ ಖಾತೆಗಳಿಗೆ ಮಾತ್ರ ಅನ್ವಯ. ಕಂಪನಿಗಳಿಗೆ, ಶಾಲೆಗಳಿಗೆ ಗೂಗಲ್ ಕಂಪನಿ ಒದಗಿಸುತ್ತಿರುವ ಪ್ರತ್ಯೇಕ ಖಾತೆಗಳಿಗೆ ಇದು ಅನ್ವಯವಾಗುವುದಿಲ್ಲ. ಸಕ್ರಿಯವಾಗಿರದ ಖಾತೆಗಳಲ್ಲಿ ಇರುವ ವಸ್ತು–ವಿಷಯವನ್ನು ಅಳಿಸಲಾಗುತ್ತದೆ. ಆದರೆ ಖಾತೆಯನ್ನು ಡಿಲೀಟ್ ಮಾಡುವುದಿಲ್ಲ ಎಂದು ಗೂಗಲ್ 2020ರಲ್ಲಿ ಹೇಳಿತ್ತು. ಈಗ ಕಂಪನಿಯು ನಿಲುವು ಬದಲಾಯಿಸಿದೆ.

ADVERTISEMENT

ಮಂಗಳವಾರದಿಂದ ಗೂಗಲ್ ಕಂಪನಿಯು, ನಿಷ್ಕ್ರಿಯವಾಗಿರುವ ಖಾತೆಗಳ ಇಮೇಲ್ ವಿಳಾಸಕ್ಕೆ ಸಂದೇಶ ರವಾನಿಸಲಿದೆ.

undefined undefined

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.