ನವದೆಹಲಿ: ವಾಣಿಜ್ಯ ಪರಿಹಾರ ತನಿಖೆಗಳಿಗೆ ಅನುಕೂಲವಾಗಲು ದಾಖಲೆಗಳ ಆನ್‌ಲೈನ್ ಸಲ್ಲಿಕೆಗೆ ಸರ್ಕಾರ ಡಿಜಿಟಲ್ ವೇದಿಕೆಯನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಶನಿವಾರ ತಿಳಿಸಿದೆ.
ಕೇಂದ್ರ ವಾಣಿಜ್ಯ ಸಚಿವಾಲಯದ ವಾಣಿಜ್ಯ ಪರಿಹಾರಗಳ ಮಹಾನಿರ್ದೇಶನಾಲಯವು (ಡಿಜಿಟಿಆರ್) ಈ ದೂರುಗಳ ತನಿಖೆ ನಡೆಸಲಿದೆ. ಈ ವೇದಿಕೆ ಶೀಘ್ರ ಕಾರ್ಯರೂಪಕ್ಕೆ ಬರುವ ನಿರೀಕ್ಷೆಯಿದೆ. ಎಲ್ಲಾ ಪಾಲುದಾರರಿಗೆ ಪಾರದರ್ಶಕತೆ, ದಕ್ಷತೆ ಮತ್ತು ವಹಿವಾಟು ಸರಳಗೊಳಿಸಲು ಇದು ನೆರವಾಗಲಿದೆ ಎಂದು ತಿಳಿಸಿದೆ.
1995ರಿಂದ 1,200ಕ್ಕೂ ಹೆಚ್ಚು ವಾಣಿಜ್ಯ ಪರಿಹಾರ ತನಿಖೆಗಳನ್ನು ನಡೆಸಿದೆ. ಜೊತೆಗೆ ನ್ಯಾಯಸಮ್ಮತವಲ್ಲದ ವಿದೇಶಿ ವ್ಯಾಪಾರ ಮತ್ತು ಸಬ್ಸಿಡಿ ಸರಕುಗಳಿಂದ ದೇಶೀಯ ವಲಯವನ್ನು ಡಿಜಿಟಿಆರ್ ರಕ್ಷಿಸುತ್ತಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.