ADVERTISEMENT

ಪೇಟಿಎಂ ಪೇಮೆಂಟ್ಸ್‌ನಲ್ಲಿ ಚೀನಾದ ಎಫ್‌ಡಿಐ ಪರಿಶೀಲನೆ

ಪಿಟಿಐ
Published 11 ಫೆಬ್ರುವರಿ 2024, 15:22 IST
Last Updated 11 ಫೆಬ್ರುವರಿ 2024, 15:22 IST
ಎಫ್‌ಡಿಐ
ಎಫ್‌ಡಿಐ   

ನವದೆಹಲಿ: ‌ಒನ್‌97 ಕಮ್ಯುನಿಕೇಷನ್‌ ಲಿಮಿಟೆಡ್‌ನ ಪೇಟಿಎಂ ಪಾವತಿ ಸೇವೆಗಳಲ್ಲಿ (ಪಿಪಿಎಸ್‌ಎಲ್‌) ಚೀನಾದಿಂದ ವಿದೇಶಿ ನೇರ ಹೂಡಿಕೆಯ (ಎಫ್‌ಡಿಐ) ಕುರಿತು ಸರ್ಕಾರ ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

2020ರ ನವೆಂಬರ್‌ನಲ್ಲಿ ಪೇಟಿಎಂ ಪಾವತಿ ಅಗ್ರಿಗೇಟರ್‌ಗಳು ಮತ್ತು ಪಾವತಿ ಗೇಟ್‌ವೇಗಳ ನಿಯಂತ್ರಣದ ಮಾರ್ಗಸೂಚಿಗಳ ಅಡಿಯಲ್ಲಿ ಪಾವತಿ ಸಂಗ್ರಾಹಕರಾಗಿ ಕಾರ್ಯನಿರ್ವಹಿಸಲು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಪರವಾನಗಿಗಾಗಿ ಅರ್ಜಿ ಸಲ್ಲಿಸಿತ್ತು. 2022ರ ನವೆಂಬರ್‌ನಲ್ಲಿ ಆರ್‌ಬಿಐ ಅರ್ಜಿಯನ್ನು ತಿರಸ್ಕರಿಸಿ, ಎಫ್‌ಡಿಐ ನಿಯಮಗಳ ಅಡಿಯಲ್ಲಿ ಮರುಸಲ್ಲಿಸುವಂತೆ ಕಂಪನಿಗೆ ಸೂಚಿಸಿತ್ತು. ನಂತರ ಕಂಪನಿ ಅರ್ಜಿ ಸಲ್ಲಿಸಿತ್ತು.

ಒನ್‌97 ಕಮ್ಯುನಿಕೇಷನ್ಸ್ ಲಿಮಿಟೆಡ್ ಚೀನಾದ ಆಂಟ್ ಗ್ರೂಪ್ ಕಂಪನಿಯಿಂದ ಹೂಡಿಕೆಯನ್ನು ಹೊಂದಿದೆ.

ADVERTISEMENT

ಅಂತರ ಸಚಿವಾಲಯ ಸಮಿತಿಯು ಪಿಪಿಎಸ್‌ಎಲ್‌ನಲ್ಲಿ ಚೀನಾದಿಂದ ಹೂಡಿಕೆಗಳನ್ನು ಪರಿಶೀಲಿಸುತ್ತಿದೆ. ಸಮಗ್ರ ಪರಿಶೀಲನೆ ನಂತರ ಎಫ್‌ಡಿಐ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

ಕೋವಿಡ್‌ ಸಾಂಕ್ರಾಮಿಕದ ನಂತರ ಭಾರತದೊಂದಿಗೆ ಭೂ ಗಡಿ ಹಂಚಿಕೊಳ್ಳುವ ದೇಶಗಳಿಂದ ಯಾವುದೇ ವಲಯದಲ್ಲಿ ವಿದೇಶಿ ಹೂಡಿಕೆಗೆ ಸರ್ಕಾರವು ತನ್ನ ಪೂರ್ವಾನುಮತಿಯನ್ನು ಕಡ್ಡಾಯಗೊಳಿಸಿದೆ.

ಗ್ರಾಹಕರಿಗೆ ಪೇಟಿಎಂ ಭರವಸೆ: ಯಾವುದೇ ಅಡೆತಡೆಗಳಿಲ್ಲದೆ ನಿರಂತರ ಸೇವೆಯನ್ನು ನೀಡಲಾಗುವುದು ಎಂದು ವ್ಯಾಪಾರಿಗಳಿಗೆ ಹಾಗೂ ಬಳಕೆದಾರರಿಗೆ ಪೇಟಿಎಂ ಪೇಮೆಂಟ್‌ ಬ್ಯಾಂಕ್‌ ಭರವಸೆ ನೀಡಿದೆ.

ಪೇಟಿಎಂ ತನ್ನ ವ್ಯಾಪಾರಿ ಪಾಲುದಾರರು ಹಿಂದಿನಂತೆಯೇ ಪೇಟಿಎಂನ ಕ್ಯೂಆರ್‌ ಕೋಡ್‌ಗಳು, ಸೌಂಡ್‌ ಬಾಕ್ಸ್‌ಗಳಿಂದ ಪ್ರಯೋಜನವನ್ನು ಪಡೆಯುವುದನ್ನು ಮುಂದುವರಿಸಬಹುದು ಎಂದು ಹೇಳಿದೆ.

ಇದೇ 29ರ ಬಳಿಕ ಪೇಟಿಎಂ ಬಳಕೆದಾರರ ಪ್ರೀಪೇಯ್ಡ್‌ ಪೇಮೆಂಟ್‌, ವ್ಯಾಲೆಟ್‌, ಫಾಸ್ಟ್ಯಾಗ್‌ಗಳಿಗೆ ಯಾವುದೇ ಠೇವಣಿ ಅಥವಾ ಟಾಪ್‌ಅಪ್‌ಗಳನ್ನು ಸ್ವೀಕರಿಸಬಾರದು ಎಂದು ಪಿಪಿಬಿಎಲ್‌ಗೆ ಆರ್‌ಬಿಐ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.