ADVERTISEMENT

ಜಿಎಸ್‌ಟಿ: ಟಿಡಿಎಸ್‌ ಅವಧಿ ವಿಸ್ತರಣೆ

ಪಿಟಿಐ
Published 30 ನವೆಂಬರ್ 2018, 20:01 IST
Last Updated 30 ನವೆಂಬರ್ 2018, 20:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಜಿಎಸ್‌ಟಿ ಕಾಯ್ದೆಯಡಿ ಅಕ್ಟೋಬರ್‌ – ಡಿಸೆಂಬರ್‌ ತಿಂಗಳ ಮೂಲದಲ್ಲಿಯೇ ತೆರಿಗೆ ಕಡಿತದ (ಟಿಡಿಎಸ್‌) ರಿಟರ್ನ್‌ ಸಲ್ಲಿಕೆಯ ಗಡುವನ್ನು ಕೇಂದ್ರ ಸರ್ಕಾರವು 2019ರ ಜನವರಿ ಅಂತ್ಯದವರೆಗೆ ವಿಸ್ತರಿಸಿದೆ.

ಹಣಕಾಸು ಸಚಿವಾಲಯವು ಈ ಸಂಬಂಧ ಅಧಿಸೂಚನೆ ಹೊರಡಿಸಿದೆ. ಸರಕು ಮತ್ತು ಸೇವಾ ತೆರಿಗೆಯಡಿ (ಜಿಎಸ್‌ಟಿ) ‘ಟಿಡಿಎಸ್‌’ ಸಲ್ಲಿಸುವುದನ್ನು ಈ ವರ್ಷದ ಅಕ್ಟೋಬರ್‌ 1ರಿಂದ ದೇಶದಾದ್ಯಂತ ಜಾರಿಗೆ ತರಲಾಗಿತ್ತು.

ಕೇಂದ್ರೀಯ ಜಿಎಸ್‌ಟಿ (ಸಿಜಿಎಸ್‌ಟಿ) ಕಾಯ್ದೆಯಡಿ ಅಧಿಸೂಚಿತ ಸಂಸ್ಥೆಗಳು ಸರಕು ಮತ್ತು ಸೇವೆಗಳ ಪೂರೈಕೆದಾರರಿಗೆ ₹ 2.5 ಲಕ್ಷಕ್ಕಿಂತ ಹೆಚ್ಚಿನ ಮೊತ್ತ ಪಾವತಿಸುವ ಸಂದರ್ಭದಲ್ಲಿ ಶೇ 1ರಷ್ಟು ಮೂಲದಲ್ಲಿಯೇ ತೆರಿಗೆ ಕಡಿತ ಮಾಡಿಕೊಳ್ಳಬೇಕಾಗುತ್ತದೆ. ರಾಜ್ಯ ಸರ್ಕಾರಗಳೂ ಶೇ 1ರಷ್ಟು ‘ಟಿಡಿಎಸ್‌’ ವಿಧಿಸಲಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.