ADVERTISEMENT

ಮೊಲಾಸಿಸ್‌ ರಫ್ತಿನ ಮೇಲೆ ಶೇ 50ರಷ್ಟು ಸುಂಕ

ಪಿಟಿಐ
Published 16 ಜನವರಿ 2024, 15:26 IST
Last Updated 16 ಜನವರಿ 2024, 15:26 IST
<div class="paragraphs"><p>ರಪ್ತು (ಪ್ರಾತಿನಿಧಿಕ ಚಿತ್ರ )</p></div>

ರಪ್ತು (ಪ್ರಾತಿನಿಧಿಕ ಚಿತ್ರ )

   

ನವದೆಹಲಿ: ದೇಶದಲ್ಲಿ ಎಥೆನಾಲ್‌ ಉತ್ಪಾದನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಮೊಲಾಸಿಸ್‌ (ಕಾಕಂಬಿ) ರಫ್ತಿನ ಮೇಲೆ ಕೇಂದ್ರ ಸರ್ಕಾರವು ಶೇ 50ರಷ್ಟು ಸುಂಕ ವಿಧಿಸಿದೆ. ಈ ಆದೇಶವು ಜನವರಿ 18ರಿಂದ ಜಾರಿಗೆ ಬರಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

2023-24ರ ಮಾರುಕಟ್ಟೆ ಋತುವಿನಲ್ಲಿ (ಅಕ್ಟೋಬರ್‌–ಸೆಪ್ಟೆಂಬರ್) ದೇಶದಲ್ಲಿ ಸಕ್ಕರೆ ಉತ್ಪಾದನೆಯು ಇಳಿಕೆಯಾಗುವ ಸಾಧ್ಯತೆಯಿದೆ. ಹಾಗಾಗಿ, ಮದ್ಯ ಉತ್ಪಾದನೆಗೆ ಕಚ್ಚಾ ವಸ್ತುವಾಗಿ ಬಳಸುವ ಕಬ್ಬಿನ ಉಪ ಉತ್ಪನ್ನವಾದ ಮೊಲಾಸಿಸ್‌ ರಫ್ತಿಗೆ ಸುಂಕ ವಿಧಿಸಲಾಗಿದೆ ಎಂದು ಹೇಳಲಾಗಿದೆ.

ADVERTISEMENT

ದೇಶೀಯ ಡಿಸ್ಟಿಲರಿಗಳಿಗೆ ಮೊಲಾಸಿಸ್‌ನ ಲಭ್ಯತೆ ಹೆಚ್ಚಿಸಲು ಮತ್ತು ಪೆಟ್ರೋಲ್‌ ಜೊತೆಗೆ ಎಥೆನಾಲ್‌ ಮಿಶ್ರಣದ ಗುರಿ ಸಾಧನೆಗೆ ಸರ್ಕಾರದ ಈ ಕ್ರಮ ಸಹಕಾರಿಯಾಗಲಿದೆ. 

ವಿಯೆಟ್ನಾಂ, ದಕ್ಷಿಣ ಕೊರಿಯಾ, ನೆದರ್‌ಲೆಂಡ್ಸ್‌ ಮತ್ತು ಫಿಲಿಪ್ಪಿನ್ಸ್‌ಗೆ ಭಾರತವು ಮೊಲಾಸಿಸ್‌ ರಫ್ತು ಮಾಡುತ್ತದೆ. ಮಹಾರಾಷ್ಟ್ರ, ಕರ್ನಾಟಕ ಮತ್ತು ಗುಜರಾತ್‌ನಿಂದ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.