ಚಿನ್ನ, ಬೆಳ್ಳಿ
ನವದೆಹಲಿ: ಬೆಳ್ಳಿಯ ಆಭರಣಗಳು ಹಾಗೂ ವಸ್ತುಗಳಿಗೆ ಸೆಪ್ಟೆಂಬರ್ 1ರಿಂದ ಅನ್ವಯ ಆಗುವಂತೆ ಐಚ್ಛಿಕ ಹಾಲ್‌ಮಾರ್ಕಿಂಗ್ ನಿಯಮವನ್ನು ಜಾರಿಗೆ ತಂದಿರುವುದಾಗಿ ಕೇಂದ್ರ ಸರ್ಕಾರ ಗುರುವಾರ ಹೇಳಿದೆ.
ಹೊಸ ವ್ಯವಸ್ಥೆಯ ಅಡಿಯಲ್ಲಿ ಗ್ರಾಹಕರು ಬೆಳ್ಳಿಯ ವಸ್ತುವು ಯಾವ ಬಗೆಯದ್ದು, ಶುದ್ಧತೆಯು ಯಾವ ಪ್ರಮಾಣದ್ದು, ಹಾಲ್‌ಮಾರ್ಕ್‌ನ ದಿನಾಂಕ ಮುಂತಾದ ವಿವರಗಳನ್ನು ಬಿಐಎಸ್ ಕೇರ್ ಮೊಬೈಲ್ ಆ್ಯಪ್ ಮೂಲಕ ತಿಳಿದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.