ADVERTISEMENT

GDP ಲೆಕ್ಕಾಚಾರದ ಮೂಲ ವರ್ಷ ಬದಲಾವಣೆಗೆ ಕೇಂದ್ರ ಸರ್ಕಾರ ಚಿಂತನೆ

ಪಿಟಿಐ
Published 29 ನವೆಂಬರ್ 2024, 13:19 IST
Last Updated 29 ನವೆಂಬರ್ 2024, 13:19 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೇಶದ ಆರ್ಥಿಕತೆಯ ನಿಖರವಾದ ಚಿತ್ರಣವನ್ನು ಪ್ರತಿಬಿಂಬಿಸಲು ಜಿಡಿಪಿಯ ಲೆಕ್ಕಾಚಾರದ ಮೂಲ ವರ್ಷವನ್ನು 2022-23ಕ್ಕೆ ಬದಲಾಯಿಸುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ (ಎಂಎಸ್‌ಪಿಐ) ಕಾರ್ಯದರ್ಶಿ ಸೌರಭ್‌ ಗಾರ್ಗ್‌ ಹೇಳಿದ್ದಾರೆ.

ಜಿಡಿಪಿ ಲೆಕ್ಕಾಚಾರಕ್ಕಾಗಿ 2011-12 ಅನ್ನು ಮೂಲ ವರ್ಷವಾಗಿ ಈವರೆಗೆ ಪರಿಗಣಿಸಲಾಗುತ್ತಿದೆ. ದಶಕದ ನಂತರದ ಮೊದಲ ಪರಿಷ್ಕರಣೆ ಇದಾಗಿದೆ. ಮುಂದಿನ ಮೂಲ ವರ್ಷ (ಜಿಡಿಪಿ) 2022-23 ಆಗಿರುತ್ತದೆ. ಫೆಬ್ರವರಿ 2026ರಿಂದ ಜಾರಿಗೆ ಬರಲಿದೆ ಎಂದು ಗಾರ್ಗ್ ಹೇಳಿದರು.

ಬಿಸ್ವನಾಥ್ ಗೋಲ್ಡಾರ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ರಾಷ್ಟ್ರೀಯ ಲೆಕ್ಕಪತ್ರ ಅಂಕಿ ಅಂಶಗಳ ಸಲಹಾ ಸಮಿತಿಯು 2026ರ ಆರಂಭದಲ್ಲಿ ವರದಿಯನ್ನು ಪೂರ್ಣಗೊಳಿಸುವ ನಿರೀಕ್ಷೆಯಿದೆ ಎಂದು ಹೇಳಿ‌ದ್ದಾರೆ.

ADVERTISEMENT

ಗ್ರಾಹಕ ಬಳಕೆಯಲ್ಲಿ ಆಗಿರುವ ವ್ಯತ್ಯಾಸದ ಮಾದರಿ, ವಲಯಗಳಲ್ಲಿ ಆಗಿರುವ ಬದಲಾವಣೆ, ಹೊಸ ವಲಯಗಳ ಸೇರ್ಪಡೆಯಂತಹ ಅರ್ಥ ವ್ಯವಸ್ಥೆಯಲ್ಲಿನ ಪರಿವರ್ತನೆಗಳನ್ನು ನಿಖರವಾಗಿ ಅರ್ಥ ಮಾಡಿಕೊಳ್ಳಲು ಕಾಲಕಾಲಕ್ಕೆ ಮೂಲ ವರ್ಷದ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.