ADVERTISEMENT

ಚೆನ್ನಂಗಿ ಬೇಳೆ ಉತ್ಪಾದನೆ ಹೆಚ್ಚಳ ನಿರೀಕ್ಷೆ

ಪಿಟಿಐ
Published 13 ಜನವರಿ 2024, 15:44 IST
Last Updated 13 ಜನವರಿ 2024, 15:44 IST
<div class="paragraphs"><p>ಚೆನ್ನಂಗಿ ಬೇಳೆ (ಪ್ರಾತಿನಿಧಿಕ ಚಿತ್ರ)</p></div>

ಚೆನ್ನಂಗಿ ಬೇಳೆ (ಪ್ರಾತಿನಿಧಿಕ ಚಿತ್ರ)

   

ನವದೆಹಲಿ: ದೇಶದಲ್ಲಿ 2023–24ರ ರಾವಿ ಋತುವಿನಲ್ಲಿ ಚೆನ್ನಂಗಿ ಬೇಳೆ (ಮಸೂರ್‌ ದಾಲ್) ಉತ್ಪಾದನೆಯು 1.6 ದಶಲಕ್ಷ ಟನ್‌ ದಾಟುವ ನಿರೀಕ್ಷೆಯಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಅಂದಾಜಿಸಿದೆ.

2022–23ರಲ್ಲಿ ಒಟ್ಟು 1.55 ದಶಲಕ್ಷ ಟನ್‌ ಉತ್ಪಾದನೆಯಾಗಿತ್ತು.

ADVERTISEMENT

ಜಾಗತಿಕವಾಗಿ ಅತಿಹೆಚ್ಚು ಪ್ರಮಾಣದಲ್ಲಿ ದ್ವಿದಳಧಾನ್ಯಗಳ ಉತ್ಪಾದನೆ ಮತ್ತು ಬಳಕೆಯಲ್ಲಿ ಭಾರತವೂ ಒಂದಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕೊರತೆ ತಲೆದೋರಿದ ವೇಳೆ ಚೆನ್ನಂಗಿ ಬೇಳೆ ಮತ್ತು ತೊಗರಿ ಬೇಳೆಯನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. 

ಶುಕ್ರವಾರ ನಡೆದ ಜಾಗತಿಕ ದ್ವಿದಳಧಾನ್ಯಗಳ ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ರೋಹಿತ್‌ ಕುಮಾರ್‌ ಸಿಂಗ್‌, ‘ಈ ಬಾರಿ ಚೆನ್ನಂಗಿ ಬೇಳೆ ಬಿತ್ತನೆ ಪ್ರದೇಶ ಹೆಚ್ಚಾಗಿದೆ. ಹಾಗಾಗಿ, ಉತ್ಪಾದನೆಯೂ ಏರಿಕೆಯಾಗುವ ಸಾಧ್ಯತೆಯಿದೆ’ ಎಂದು ಹೇಳಿದ್ದಾರೆ.

ದೇಶದಲ್ಲಿ ದ್ವಿದಳಧಾನ್ಯಗಳ ವಾರ್ಷಿಕ ಸರಾಸರಿ ಉತ್ಪಾದನೆ 26ರಿಂದ 27 ದಶಲಕ್ಷ ಟನ್‌ನಷ್ಟಿದೆ. ಕಡಲೆ ಕಾಳು ಮತ್ತು ಹೆಸರು ಕಾಳು ಉತ್ಪಾದನೆಯಲ್ಲಿ ಭಾರತವು ಸ್ವಾವಲಂಬನೆ ಸಾಧಿಸಿದೆ. ಆದರೆ, ಚೆನ್ನಂಗಿ ಬೇಳೆ ಮತ್ತು ತೊಗರಿ ಬೇಳೆ ಕೊರತೆಯಾದಾಗ ಆಮದಿನ ಮೊರೆ ಹೋಗುವುದು ಅನಿವಾರ್ಯ ಎಂದು ಹೇಳಿದ್ದಾರೆ. 

ಕೇಂದ್ರ ಕೃಷಿ ಸಚಿವಾಲಯದ ಅಂಕಿಅಂಶದ ಪ್ರಕಾರ ಹಿಂದಿನ ವರ್ಷ 1.83 ದಶಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಚೆನ್ನಂಗಿ ಬೇಳೆ ಬಿತ್ತನೆಯಾಗಿತ್ತು. ಈ ಬಾರಿ 1.94 ದಶಲಕ್ಷ ಹೆಕ್ಟೇರ್‌ಗೆ ವಿಸ್ತರಣೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.