ADVERTISEMENT

ಸರ್ಕಾರ ಉದ್ದಿಮೆ ನಡೆಸಬಾರದು: ಮಾರುತಿ ಸುಜುಕಿ ಇಂಡಿಯಾದ ಅಧ್ಯಕ್ಷ ಭಾರ್ಗವ

ಪಿಟಿಐ
Published 4 ಸೆಪ್ಟೆಂಬರ್ 2022, 19:10 IST
Last Updated 4 ಸೆಪ್ಟೆಂಬರ್ 2022, 19:10 IST
ಮಾರುತಿ ಸುಜುಕಿ ಇಂಡಿಯಾದ ಅಧ್ಯಕ್ಷ ಆರ್‌.ಸಿ. ಭಾರ್ಗವ್
ಮಾರುತಿ ಸುಜುಕಿ ಇಂಡಿಯಾದ ಅಧ್ಯಕ್ಷ ಆರ್‌.ಸಿ. ಭಾರ್ಗವ್    

ನವದೆಹಲಿ: ಸರ್ಕಾರವು ಉದ್ದಿಮೆಗಳನ್ನು ನಡೆಸಬಾರದು. ಏಕೆಂದರೆ ಸರ್ಕಾರಿ ಸ್ವಾಮ್ಯದ ಕಂಪನಿಗಳು ಅಸಮರ್ಥವಾಗಿದ್ದು, ಅವುಗಳ ಬೆಳವಣಿಗೆಗೆ ಬೇಕಾದಷ್ಟು ವರಮಾನ ಸೃಷ್ಟಿಸುತ್ತಿಲ್ಲ ಎಂದು ಮಾರುತಿ ಸುಜುಕಿ ಇಂಡಿಯಾದ ಅಧ್ಯಕ್ಷ ಆರ್‌.ಸಿ. ಭಾರ್ಗವ್ ಹೇಳಿದ್ದಾರೆ.

ಸರ್ಕಾರಿ ವಲಯದ ಕಂಪನಿಗಳ ಬೆಳವಣಿಗೆಗೆ ಎಲ್ಲಾ ಕಾಲಕ್ಕೂ ಸರ್ಕಾರದ ಬೆಂಬಲ ಮತ್ತು ಹಣಕಾಸಿನ ನೆರವು ಬೇಕು ಎಂದು ಅವರು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಸರ್ಕಾರ ನಡೆಸುತ್ತಿರುವ ಕಂಪನಿಗಳು ಸಮರ್ಥವಾಗಿಲ್ಲ. ಉತ್ಪಾದಕತೆಯನ್ನು ಹೊಂದಿಲ್ಲ. ಲಾಭ ಗಳಿಸುತ್ತಿಲ್ಲ. ಸಂಪನ್ಮೂಲವನ್ನೂ ಸೃಷ್ಟಿಸುತ್ತಿಲ್ಲ. ಬೆಳವಣಿಗೆಯನ್ನೂ ಸಾಧಿಸುತ್ತಿಲ್ಲ ಎಂದು ಅವರು ವಿವರಿಸಿದ್ದಾರೆ.

ADVERTISEMENT

ಸಾರ್ವಜನಿಕ ವಲಯದ ವೈಫಲ್ಯವು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ರಷ್ಯಾ, ಇಂಗ್ಲೆಂಡ್‌, ಫ್ರಾನ್ಸ್‌ ಮತ್ತು ಜಪಾನ್‌ನಲ್ಲೂ ಆಗಿವೆ. ಈ ದೇಶಗಳಲ್ಲಿ ಪ್ರತಿಯೊಬ್ಬರೂ ಸಾರ್ವಜನಿಕ ವಲಯದಿಂದ ಹೊರಬರುತ್ತಿದ್ದಾರೆ ಎಂದು ಭಾರ್ಗವ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.