ADVERTISEMENT

ಬ್ಯಾಂಕ್‌ಗಳ ಖಾಸಗೀಕರಣಕ್ಕೂ ಕೋವಿಡ್‌ ಅಡ್ಡಿ

ಪಿಟಿಐ
Published 14 ಜೂನ್ 2020, 15:01 IST
Last Updated 14 ಜೂನ್ 2020, 15:01 IST
bank
bank   

ನವದೆಹಲಿ: ಕೋವಿಡ್‌–19 ಬಿಕ್ಕಟ್ಟು ಹಾಗೂಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ (ಪಿಎಸ್‌ಬಿ‌) ಮೌಲ್ಯ ಇಳಿಮುಖ ಆಗಿರುವುದರಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ಖಾಸಗೀಕರಣ ಗೊಳಿಸುವುದು ಕಷ್ಟವಾಗಲಿದೆ ಎಂದು ಮೂಲಗಳು ಅಭಿಪ್ರಾಯಪಟ್ಟಿವೆ.

ಸದ್ಯ, ಸರ್ಕಾರಿ ಸ್ವಾಮ್ಯದ ನಾಲ್ಕು ಬ್ಯಾಂಕ್‌ಗಳು ಆರ್‌ಬಿಐನ ಕಠಿಣ ಸ್ವರೂಪದ ಆರ್ಥಿಕ ನಿರ್ಬಂಧಗಳ (ಪಿಸಿಎ) ವ್ಯಾಪ್ತಿಗೆ ಒಳಪಟ್ಟಿವೆ. ಹೀಗಾಗಿ ಇಂಡಿಯನ್‌ ಓವರ್‌ಸಿಸ್ ಬ್ಯಾಂಕ್‌, ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ, ಯೂಕೊ ಬ್ಯಾಂಕ್‌ ಮತ್ತು ಯುನೈಟೆಡ್‌ ಬ್ಯಾಂಕ್‌ ಆಫ್‌ ಇಂಡಿಯಾವನ್ನು ಮಾರಾಟ ಮಾಡುವುದು ಸೂಕ್ತವಾದ ನಿರ್ಧಾರ ಅಲ್ಲ ಎಂದು ಹೇಳಿವೆ.

ಬ್ಯಾಂಕ್‌ಗಳ ಮೌಲ್ಯ ಇಳಿಮುಖವಾಗಿದೆ. ಹೀಗಾಗಿ ಷೇರು ಮಾರಾಟವೂ ಕಷ್ಟವಾಗಿದೆ. ಬಾಸೆಲ್‌–3 ಮಾನದಂಡ ತಲುಪಲು ಕೇಂದ್ರ ಸರ್ಕಾರ ಬಂಡವಾಳ ನೆರವು ಒದಗಿಸಿರುವುದರಿಂದ ಕೆಲವು ಬ್ಯಾಂಕ್‌ಗಳಲ್ಲಿ ಸರ್ಕಾರದ ಷೇರುಪಾಲು ಶೇ 75ರಷ್ಟಾಗಿದೆ.

ADVERTISEMENT

ಕೋವಿಡ್‌ನಿಂದಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಚೇತರಿಕೆಗಷ್ಟೇ ಅಡ್ಡಿಯಾಗಿಲ್ಲ. ಖಾಸಗಿ ಬ್ಯಾಂಕ್‌ಗಳ ಆರ್ಥಿಕ ಸ್ಥಿತಿಯ ಮೇಲೆಯೂ ಪರಿಣಾಮ ಬೀರಿದೆ ಎಂದೂ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.