ADVERTISEMENT

ಲಾಕ್‌ಡೌನ್: ಜೂನ್ ತ್ರೈಮಾಸಿಕದಲ್ಲಿ ಒಟ್ಟು ತೆರಿಗೆ ಸಂಗ್ರಹ ಶೇ 31ರಷ್ಟು ಕುಸಿತ

ಪಿಟಿಐ
Published 16 ಜೂನ್ 2020, 11:10 IST
Last Updated 16 ಜೂನ್ 2020, 11:10 IST
ತೆರಿಗೆ ಸಂಗ್ರಹ–ಸಾಂಕೇತಿಕ ಚಿತ್ರ
ತೆರಿಗೆ ಸಂಗ್ರಹ–ಸಾಂಕೇತಿಕ ಚಿತ್ರ   

ಮುಂಬೈ: ಪ್ರಸಕ್ತ ಹಣಕಾಸು ವರ್ಷದಲ್ಲಿ ಜೂನ್‌ 15ರ ವರೆಗೂ ಒಟ್ಟು ತೆರಿಗೆ ಸಂಗ್ರಹ ಶೇ 31ರಷ್ಟು ಇಳಿಕೆಯಾಗಿರುವುದಾಗಿ ಮಂಗಳವಾರ ಅಧಿಕಾರಿಯೊಬ್ಬರು ಹೇಳಿದ್ದಾರೆ.

'2020-21ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ನೇರ ತೆರಿಗೆ ಒಟ್ಟು ಸಂಗ್ರಹ ಶೇ 31ರಷ್ಟು ಕುಸಿದಿದ್ದು, ₹1,37,825 ಕೋಟಿ ಆಗಿದೆ. 2019ರ ಜೂನ್ ತ್ರೈಮಾಸಿಕದಲ್ಲಿ ₹1,99,755 ಕೋಟಿ ಸಂಗ್ರಹವಾಗಿತ್ತು' ಎಂದು ಆದಾಯ ತೆರಿಗೆ ಅಧಿಕಾರಿ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ಮುಂಗಡ ಕಾರ್ಪೊರೇಟ್‌ ತೆರಿಗೆ ಸಂಗ್ರಹದಲ್ಲಿ ಶೇ 79ರಷ್ಟು ಇಳಿಕೆಯಾಗಿದೆ.

ADVERTISEMENT

ಕೊರೊನಾ ವೈರಸ್‌ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಜೂನ್‌ ತ್ರೈಮಾಸಿಕದ ಮೊದಲ ಎರಡು ತಿಂಗಳ ದೇಶದಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿತ್ತು. ಇದರಿಂದಾಗಿ ದೇಶದಲ್ಲಿ ಶೇ 80ರಷ್ಟು ಆರ್ಥಿಕ ಚಟುವಟಿಕೆಗಳಿಗೆ ಹೊಡೆತ ಉಂಟಾಗಿದೆ.

ಜೂನ್‌ 1ರಿಂದ ಲಾಕ್‌ಡೌನ್‌ ಸಡಿಲಿಕೆಯಾಗಿದ್ದರೂ ಆರ್ಥಿಕತೆ ಇನ್ನಷ್ಟೇ ಸಹಜ ಸ್ಥಿತಿಗೆ ಮರಳಬೇಕಿದೆ. ಮುಂಗಡ ತೆರಿಗೆ ಪಾವತಿಗೆ ಜೂನ್‌ 15 ಕೊನೆಯ ದಿನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.