ಬೆಂಗಳೂರು: ಜಿಆರ್‌ಟಿ ಜ್ಯುವೆಲರ್ಸ್‌ನಿಂದ ಹವಳ ಮತ್ತು ಪಚ್ಚೆ ಆಭರಣ ಮೇಳ ಆರಂಭಿಸಲಾಗಿದೆ.
ಈ ಹೊಸ ಸಂಗ್ರಹದಲ್ಲಿ ಚಿನ್ನದ ಆಭರಣಗಳ ಮೇಲೆ ಪ್ರತಿ ಗ್ರಾಂಗೆ ₹50 ರಿಯಾಯಿತಿ ದೊರೆಯಲಿದೆ. ಹಳೆಯ ಚಿನ್ನದ ಆಭರಣಗಳ ವಿನಿಮಯದಲ್ಲಿ ಪ್ರತಿ ಗ್ರಾಂಗೆ ₹50 ಹೆಚ್ಚುವರಿ ರಿಯಾಯಿತಿ ದೊರೆಯಲಿದೆ.
ರೂಬಿ ಮತ್ತು ಎಮರಾಲ್ಡ್ ಸ್ಟೋನ್ ಮೌಲ್ಯದ ಮೇಲೆ ಶೇ 20ರಷ್ಟು ರಿಯಾಯಿತಿ ಇದೆ. ಈ ವಿಶೇಷ ಕೊಡುಗೆಯು ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿರುವ ಮಳಿಗೆಗಳಿಗೆ ಮಾತ್ರ ಅನ್ವಯಿಸಲಿದೆ. ಗ್ರಾಹಕರು ಮಳಿಗೆಗೆ ಭೇಟಿ ನೀಡಿ ಇದರ ಪ್ರಯೋಜನ ಪಡೆಯಬಹುದಾಗಿದೆ ಎಂದು ಕಂಪನಿ ತಿಳಿಸಿದೆ.
‘ಹೊಸ ಮಾಣಿಕ್ಯ ಮತ್ತು ಪಚ್ಚೆ ಆಭರಣಗಳನ್ನು ಗ್ರಾಹಕರಿಗೆ ಪರಿಚಯಿಸಲು ಉತ್ಸುಕರಾಗಿದ್ದೇವೆ. ಪ್ರತಿ ಆಭರಣವು ನಮ್ಮ ಕುಶಲಕರ್ಮಿಗಳ ಕಾಳಜಿ ಮತ್ತು ಕೌಶಲವನ್ನು ಪ್ರತಿಬಿಂಬಿಸುತ್ತದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ತಯಾರಿಸಿದ್ದೇವೆ’ ಎಂದು ಜಿಆರ್‌ಟಿ ಜ್ಯುವೆಲರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಜಿ.ಆರ್. ಆನಂದ್ ಅನಂತ್ ಪದ್ಮನಾಭನ್ ಮತ್ತು ಜಿ.ಆರ್. ರಾಧಾಕೃಷ್ಣನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.