ADVERTISEMENT

ಜಿಎಸ್‌ಟಿ: ₹1.72 ಲಕ್ಷ ಕೋಟಿ ಸಂಗ್ರಹ

ಪಿಟಿಐ
Published 1 ನವೆಂಬರ್ 2023, 16:35 IST
Last Updated 1 ನವೆಂಬರ್ 2023, 16:35 IST
ಜಿಎಸ್‌ಟಿ: ಐಸ್ಟಾಕ್ ಚಿತ್ರ
ಜಿಎಸ್‌ಟಿ: ಐಸ್ಟಾಕ್ ಚಿತ್ರ   

ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ಮೂಲಕ ಅಕ್ಟೋಬರ್‌ನಲ್ಲಿ ₹1.72 ಲಕ್ಷ ಕೋಟಿ ವರಮಾನ ಸಂಗ್ರಹ ಆಗಿದೆ. ಜಿಎಸ್‌ಟಿ ವ್ಯವಸ್ಥೆಯು ಜಾರಿಗೆ ಬಂದ ಬಳಿಕ ಆಗಿರುವ ಎರಡನೇ ಅತಿಹೆಚ್ಚಿನ ಮಾಸಿಕ ವರಮಾನ ಸಂಗ್ರಹ ಇದಾಗಿದೆ. 

ಈ ಹಿಂದೆ ಏಪ್ರಿಲ್ ತಿಂಗಳಿನಲ್ಲಿ ₹1.87 ಲಕ್ಷ ಕೋಟಿಯಷ್ಟು ದಾಖಲೆ ಮಟ್ಟದ ಜಿಎಸ್‌ಟಿ ವರಮಾನ ಸಂಗ್ರಹ ಆಗಿತ್ತು. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಸಂಗ್ರಹ ಆಗಿದ್ದ ಮೊತ್ತಕ್ಕೆ ಹೋಲಿಸಿದರೆ ಶೇ 13ರಷ್ಟು ಹೆಚ್ಚು ವರಮಾನ ಸಂಗ್ರಹ ಆಗಿದೆ. ತೆರಿಗೆ ವಂಚನೆ ತಡೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳು ಮತ್ತು ಹಬ್ಬದ ಬೇಡಿಕೆಯಿಂದಾಗಿ ತೆರಿಗೆ ಸಂಗ್ರಹದಲ್ಲಿ ಈ ಪ್ರಮಾಣದ ಹೆಚ್ಚಳ ಕಂಡುಬಂದಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ತೆರಿಗೆ ಸಂಗ್ರಹವು ಸ್ಥಿರವಾಗಿದ್ದು ತೆರಿಗೆ ಹಂತಗಳನ್ನು ಸರಳಗೊಳಿಸುವುದನ್ನು ಸರ್ಕಾರ ಇದೀಗ ಪರಿಗಣಿಸಬಹುದು.
ಸೌರಭ್‌ ಅಗರ್ವಾಲ್‌, ಅರ್ನ್ಸ್ಟ್ ಆ್ಯಂಡ್ ಯಂಗ್‌ (ಇವೈ) ಸಂಸ್ಥೆಯ ತೆರಿಗೆ ಪಾಲುದಾರ

2023–24ನೇ ಹಣಕಾಸು ವರ್ಷಕ್ಕೆ ಜಿಎಸ್‌ಟಿ ವರಮಾನದ ಸರಾಸರಿ ಸಂಗ್ರಹವು ₹1.66 ಲಕ್ಷ ಕೋಟಿ ಆಗಿದೆ. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ 11ರಷ್ಟು ಹೆಚ್ಚು ಸಂಗ್ರಹ ಆಗಿದೆ.

ADVERTISEMENT

ವರ್ಷದಿಂದ ವರ್ಷಕ್ಕೆ ತೆರಿಗೆ ಸಂಗ್ರಹವು ಅಕ್ಟೋಬರ್‌ನಲ್ಲಿ 10 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿರುವುದು ಉತ್ತೇಜನಕಾರಿ ಬೆಳವಣಿಗೆ. ಸಿಜಿಎಸ್‌ಟಿ ಸಂಗ್ರಹವು 2023–24ರ ಬಜೆಟ್‌ ಅಂದಾಜನ್ನೂ ಮೀರುವ ಸಾಧ್ಯತೆ ಇದೆ ಎಂದು ಐಸಿಆರ್‌ಎನ ಮುಖ್ಯ ಆರ್ಥಿಕ ತಜ್ಞೆ ಅದಿತಿ ನಾಯರ್ ಹೇಳಿದ್ದಾರೆ.

ಜಿಎಸ್‌ಟಿ ಸಂಗ್ರಹ (₹ಲಕ್ಷ ಕೋಟಿಗಳಲ್ಲಿ)

ಏಪ್ರಿಲ್‌ : 1.87

ಮೇ : 1.57

ಜೂನ್‌ : 1.61

ಜುಲೈ : 1.65

ಆಗಸ್ಟ್‌ : 1.59

ಸೆಪ್ಟೆಂಬರ್‌ :1.63

ಅಕ್ಟೋಬರ್‌ : 1.72

ವರಮಾನ ಸಂಗ್ರಹ ವಿವರ (₹ ಕೋಟಿಗಳಲ್ಲಿ)

ಸಿಜಿಎಸ್‌ಟಿ : 30,062

ಎಸ್‌ಜಿಎಸ್‌ಟಿ : 38,171

ಐಜಿಎಸ್‌ಟಿ : 91,315

ಸೆಸ್‌ :12,456

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.