ADVERTISEMENT

₹1.88 ಲಕ್ಷ ಕೋಟಿ ಮೊತ್ತದ ಜಿಎಸ್‌ಟಿ ವಂಚನೆ ಪತ್ತೆ: ಕೇಂದ್ರ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2025, 15:49 IST
Last Updated 10 ಫೆಬ್ರುವರಿ 2025, 15:49 IST
ಜಿಎಸ್‌ಟಿ ಸಂಗ್ರಹ–ಪ್ರಾತಿನಿಧಿಕ ಚಿತ್ರ
ಜಿಎಸ್‌ಟಿ ಸಂಗ್ರಹ–ಪ್ರಾತಿನಿಧಿಕ ಚಿತ್ರ   

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌ನಿಂದ ಡಿಸೆಂಬರ್‌ ಅವಧಿಯಲ್ಲಿ ಕೇಂದ್ರ ಜಿಎಸ್‌ಟಿ ಅಧಿಕಾರಿಗಳು ₹1.88 ಲಕ್ಷ ಕೋಟಿಗೂ ಹೆಚ್ಚು ಮೊತ್ತದ ಜಿಎಸ್‌ಟಿ ವಂಚನೆಯನ್ನು ಪತ್ತೆ ಹಚ್ಚಿದ್ದಾರೆ ಎಂದು ಕೇಂದ್ರ ಸರ್ಕಾರವು ಲೋಕಸಭೆಗೆ ಸೋಮವಾರ ತಿಳಿಸಿದೆ.

ಈ ಅವಧಿಯಲ್ಲಿ ಒಟ್ಟು 72,393 ವಂಚನೆ ಪ್ರಕರಣಗಳು ನಡೆದಿವೆ. ಇದರ ಮೊತ್ತ ₹1.88 ಲಕ್ಷ ಕೋಟಿಯಷ್ಟಾಗಿದೆ. 132 ಜನರನ್ನು ಬಂಧಿಸಲಾಗಿದ್ದು, ₹20,128 ಕೋಟಿಯನ್ನು ವಸೂಲಿ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಪಂಕಜ್‌ ಚೌಧರಿ ಹೇಳಿದ್ದಾರೆ.

2023–24ರ ಪೂರ್ಣ ಹಣಕಾಸು ವರ್ಷದಲ್ಲಿ ₹2.30 ಲಕ್ಷ ಕೋಟಿ ಮೊತ್ತದ 20,582 ವಂಚನೆ ಪ್ರಕರಣಗಳು ನಡೆದಿದ್ದವು. ₹31,758 ಕೋಟಿ ವಸೂಲಿ ಮಾಡಿದ್ದರೆ, 223 ಜನರನ್ನು ಬಂಧಿಸಲಾಗಿತ್ತು.

ADVERTISEMENT

2022-23 ಮತ್ತು 2021-22ರಲ್ಲಿ ಕ್ರಮವಾಗಿ ₹1.32 ಲಕ್ಷ ಕೋಟಿ ಮತ್ತು ₹73,238 ಕೋಟಿ ಮೌಲ್ಯದ ಜಿಎಸ್‌ಟಿ ವಂಚನೆ ಪ್ರಕರಣಗಳನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.