GST
ಬೆಂಗಳೂರು: ಎಲ್‌ಪಿಜಿ ಸಿಲಿಂಡರ್ ಮತ್ತು ಬಾಡಿಗೆ ಕಟ್ಟಡಗಳ ಮೇಲಿನ ಜಿಎಸ್‌ಟಿಯನ್ನು ಕಡಿತಗೊಳಿಸಿಲ್ಲ. ಹೀಗಾಗಿ, ಗ್ರಾಹಕರಿಗೆ ಜಿಎಸ್‌ಟಿ ಇಳಿಕೆ ಪ್ರಯೋಜನವನ್ನು ವರ್ಗಾಯಿಸಲು ಸಾಧ್ಯವಾಗುವುದಿಲ್ಲ ಎಂದು ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ಹೇಳಿದೆ.
ಹೋಟೆಲ್ ಆಹಾರ ಮತ್ತು ಕೊಠಡಿ ದರಗಳನ್ನು ಯಾವಾಗ ಕಡಿಮೆ ಮಾಡುತ್ತೀರಿ ಎಂದು ಗ್ರಾಹಕರು ನಮ್ಮನ್ನು ಕೇಳುತ್ತಿದ್ದಾರೆ. ಆದರೆ ಸರ್ಕಾರದಿಂದ ಸ್ವಲ್ಪ ಮಟ್ಟಿನ ಪರಿಹಾರ ಸಿಗದ ಹೊರತು ಈ ಹಂತದಲ್ಲಿ ಜಿಎಸ್‌ಟಿ ಇಳಿಕೆ ಪ್ರಯೋಜನವನ್ನು ಗ್ರಾಹಕರಿಗೆ ತಲುಪಿಸಲು ಆಗುವುದಿಲ್ಲ ಎಂದು ಕರ್ನಾಟಕ ರಾಜ್ಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಜಿ.ಕೆ.ಶೆಟ್ಟಿ ಹೇಳಿದ್ದಾರೆ.
ತರಕಾರಿಗಳು, ಮಾಂಸ ಸೇರಿ ಹಲವು ಉತ್ಪನ್ನಗಳಿಗೆ ಆರಂಭದಿಂದಲೂ ಶೂನ್ಯ ಸುಂಕವಿದೆ. ಆದರೆ, ಅಡುಗೆ ಅನಿಲ ಸಿಲಿಂಡರ್ ಮತ್ತು ಬಾಡಿಗೆ ಕಟ್ಟಡದಲ್ಲಿ ವ್ಯವಹಾರ ನಡೆಸುವ ಹೋಟೆಲ್‌ಗಳು ಪಾವತಿಸುವ ಬಾಡಿಗೆಯ ಮೇಲೆ ಶೇ 18ರಷ್ಟು ಜಿಎಸ್‌ಟಿ ಪಾವತಿ ಮಾಡುತ್ತಿವೆ.
ಬಹುತೇಕ ರೆಸ್ಟೋರೆಂಟ್ ಮತ್ತು ಹೋಟೆಲ್‌ಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಬಾಡಿಗೆಯ ಮೇಲಿನ ಜಿಎಸ್‌ಟಿಯನ್ನು ಶೇ 5ಕ್ಕೆ ಇಳಿಕೆ ಮಾಡಿದರೆ, ಗ್ರಾಹಕರಿಗೆ ಇಳಿಕೆಯ ಪ್ರಯೋಜನವನ್ನು ವರ್ಗಾಯಿಸಲಾಗುವುದು. ಸದ್ಯದ ಜಿಎಸ್‌ಟಿ ದರದೊಂದಿಗೆ ಗ್ರಾಹಕರಿಗೆ ಯಾವುದೇ ಪ್ರಯೋಜನವನ್ನು ವರ್ಗಾಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.