ADVERTISEMENT

ನಿರೀಕ್ಷೆಗೂ ಮೀರಿ ಜಿಎಸ್‌ಟಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2019, 19:04 IST
Last Updated 1 ಏಪ್ರಿಲ್ 2019, 19:04 IST
   

ನವದೆಹಲಿ: 2018–19ನೇ ಹಣಕಾಸು ವರ್ಷದಲ್ಲಿ ಸರಕು ಮತ್ತು ಸೇವಾ ತೆರಿಗೆಯಿಂದ (ಜಿಎಸ್‌ಟಿ) ನಿರೀಕ್ಷೆಗೂ ಮೀರಿ ₹ 11.77 ಲಕ್ಷ ಕೋಟಿ ಸಂಗ್ರಹವಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

2017–18ನೇ ಹಣಕಾಸು ವರ್ಷದಲ್ಲಿ ₹ 11.47 ಲಕ್ಷ ಕೋಟಿ ಇತ್ತು. 2019–20ನೇ ಹಣಕಾಸು ವರ್ಷಕ್ಕೆ ₹ 13.71 ಲಕ್ಷ ಕೋಟಿ ಸಂಗ್ರಹವಾಗುವ ನಿರೀಕ್ಷೆ ಮಾಡಲಾಗಿದೆ.

ಜಿಎಸ್‌ಟಿ ಜಾರಿಗೆ ಬಂದಾಗಿನಿಂದಮಾರ್ಚ್‌ನಲ್ಲಿ ಅತ್ಯಂತ ಗರಿಷ್ಠ 75.95 ಲಕ್ಷ ರಿಟರ್ನ್ಸ್‌ಗಳು ಸಲ್ಲಿಕೆಯಾಗಿವೆ. ಇದರಿಂದ ತೆರಿಗೆಸಂಗ್ರಹವೂ ₹ 1.06 ಲಕ್ಷ ಕೋಟಿ ದಾಖಲೆ ಮಟ್ಟಕ್ಕೆ ತಲುಪಿದೆ.

ADVERTISEMENT

‘ಸರಕು ಮತ್ತು ಸೇವೆಗಳ ತಯಾರಿಕೆ ಮತ್ತು ಬಳಕೆಯಲ್ಲಿ ಬೆಳವಣಿಗೆ ಕಂಡುಬಂದಿದೆ ಎನ್ನುವುದನ್ನು ಮಾರ್ಚ್‌ ತಿಂಗಳ ತೆರಿಗೆ ಸಂಗ್ರಹ ಸೂಚಿಸುತ್ತಿದೆ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಟ್ವೀಟ್‌ ಮಾಡಿದ್ದಾರೆ.

ವಿವಿಧ ಸರಕುಗಳ ತೆರಿಗೆ ದರದಲ್ಲಿ ಕಡಿತ ಮಾಡಿದ್ದರೂ ವರಮಾನ ಸಂಗ್ರಹದಲ್ಲಿ ಏರಿಕೆಯಾಗುತ್ತಿದೆ ಎಂದು ಸಚಿವಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.