ADVERTISEMENT

ಜಿಎಸ್‌ಟಿ ದರ ಕಡಿತ: ಹುಂಡೈ, ಟಾಟಾ ವಾಹನ ದರ ಇಳಿಕೆ

ಪಿಟಿಐ
Published 7 ಸೆಪ್ಟೆಂಬರ್ 2025, 15:25 IST
Last Updated 7 ಸೆಪ್ಟೆಂಬರ್ 2025, 15:25 IST
ಹುಂಡೈ
ಹುಂಡೈ   

ನವದೆಹಲಿ: ವಾಹನ ತಯಾರಿಕಾ ಕಂಪನಿ ಹುಂಡೈ ಮೋಟರ್‌ ಇಂಡಿಯಾ ಮತ್ತು ಟಾಟಾ ಮೋಟರ್ಸ್ ಜಿಎಸ್‌ಟಿ ದರ ಕಡಿತದ ಪರಿಣಾಮವಾಗಿ ತಮ್ಮ ವಾಹನಗಳ ಬೆಲೆ ಎಷ್ಟರಮಟ್ಟಿಗೆ ಇಳಿಕೆ ಆಗುತ್ತದೆ ಎನ್ನುವುದನ್ನು ಪ್ರಕಟಿಸಿವೆ.

ಜಿಎಸ್‌ಟಿ ಪರಿಷ್ಕರಣೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಕಂಪನಿಗಳು ಮುಂದಾಗಿವೆ. ಪರಿಷ್ಕೃತ ದರವು ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿದೆ ಎಂದು ಎರಡೂ ಕಂಪನಿಗಳು ಭಾನುವಾರ ತಿಳಿಸಿವೆ.

ಹುಂಡೈ ತನ್ನ ವರ್ನಾ ಮಾದರಿಯ ವಾಹನದ ಬೆಲೆ ₹60,640ರಷ್ಟು ಮತ್ತು ಪ್ರೀಮಿಯಂ ಎಸ್‌ಯುವಿ ಟಕ್ಸನ್‌ ದರ ₹2.4 ಲಕ್ಷದಷ್ಟು ತಗ್ಗಲಿದೆ ಎಂದು ಹೇಳಿದೆ.

ADVERTISEMENT

ಟಾಟಾ ಮೋಟರ್ಸ್ ಕಂಪನಿಯು ತನ್ನ ವಾಣಿಜ್ಯ ವಾಹನಗಳ ಬೆಲೆಯು ₹30 ಸಾವಿರದಿಂದ ₹4.65 ಲಕ್ಷದವರೆಗೆ ಕಡಿಮೆ ಆಗಲಿದೆ ಎಂದು ತಿಳಿಸಿದೆ. ದರ ಇಳಿಕೆ ವಾಹನದ ಮಾದರಿಯನ್ನು ಅವಲಂಬಿಸಿರುತ್ತದೆ. ಕಂಪನಿಯು ತನ್ನ ಪ್ರಯಾಣಿಕ ವಾಹನಗಳ ಬೆಲೆ ಇಳಿಕೆಯ ಬಗ್ಗೆ ಈಗಾಗಲೇ ಮಾಹಿತಿ ನೀಡಿದೆ.

ಟಾಟಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.